ಕೊರೊನಾ ಮಹಾಮಾರಿಗೆ ಬಲಿಯಾದವರಿಗೆ ಜೋ ಬೈಡನ್ ನಮನ..!
ಅಮೆರಿಕಾ: ಅಮೆರಿಕಾದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು, ಲಿಂಕನ್ ಸ್ಮಾರಕದಲ್ಲಿ ಕೊರೊನಾ ಪಿಡುಗಿನಿಂದಾಗಿ ಮೃತಪಟ್ಟವರಿಗೆ ನಮನ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಗುಣಮುಖರಾಗಲು ನಾವಿದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೆಲವೊಮ್ಮೆ ಇಂತಹ ಸಂದರ್ಭವನ್ನು ನೆನಪಿಸಿಕೊಳ್ಳೋದು ಕಷ್ಟಕರ. ಆದರೂ ನಾವಿದರಿಂದ ಗುಣಮುಖರಾಗಲಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ನಾವೊಂದು ರಾಷ್ಟ್ರವಾಗಿ ಇದನ್ನು ಮಾಡುವುದು ಮುಖ್ಯ. ಅದಕ್ಕಾಗಿಯೇ ನಾವು ಇಂದು ಇಲ್ಲಿದ್ದೇವೆ. ಸೂರ್ಯೋದಯ ಮತ್ತು ಮುಸ್ಸಂಜೆಯ ನಡುವೆ ಕತ್ತಲೆಯನ್ನು ಹೋಗಲಾಡಿಸಲು ದೀಪವನ್ನು ಬೆಳಗಿಸೋಣ ಮತ್ತು ಈ ಕ್ಷಣದಲ್ಲಿ ಬಲಿಯಾದವರನ್ನು ನೆನಪಿಸಿಕೊಳ್ಳೋಣ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷೆಯಾಗಿ ಪದಗ್ರಹಣ ಮಾಡಲಿರುವ ಕಮಲಾ ಹ್ಯಾರಿಸ್ ಸಹ ಉಪಸ್ಥಿತರಿದ್ದರು.
ತನ್ನ ಗಂಡ ‘ಅವನಲ್ಲ ಅವಳು’ ಎಂದು ಗೊತ್ತಾಯ್ತು…. ಮುಂದೇನಾಯ್ತು..!
17 ವರ್ಷದ ಯುವತಿ ಮೇಲೆ 38 ಜನರಿಂದ ನಿರಂತರ ಅತ್ಯಚಾರ : ಕಣ್ಣಲ್ಲಿ ನೀರು ತರಿಸುತ್ತೆ ಈ ಯುವತಿಯ ಕಥೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








