ಜೋಗ್ ಫಾಲ್ಸ್ ನಲ್ಲಿ ಪ್ರಕೃತಿ ವಿಸ್ಮಯ – ಗಾಳಿಯ ರಭಸಕ್ಕೆ ನೀರು ಮೇಲೆರುವಂತೆ ಭಾಸ
ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ನಡೆಯುತ್ತಿರುವ ಪ್ರಕೃತಿಯ ವಿಸ್ಮಯ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ಜಲಪಾತದಲ್ಲಿ ಮೇಲಿನಿಂದ ಬೀಳುತ್ತಿದ್ದ ನೀರು, ಗಾಳಿಯ ರಭಸಕ್ಕೆ ಮತ್ತೆ ಮೇಲಕ್ಕೆ ವಾಪಸ್ಸಾಗುತ್ತಿರುವಂತೆ ಭಾಸವಾಗುತ್ತಿದೆ. ಈ ದೃಶ್ಯವನ್ನ ಸ್ಥಳಿಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ.
Natural reverse pumping of water at Jog Falls! Monsoon has just arrived. Strong winds pushing the falling water back. Something unusual happening this year. I was born and brought up there. Never seen something like this. @News18Kannada #Karnataka pic.twitter.com/34QD71vr2B
— DP SATISH (@dp_satish) June 13, 2022
ಈ ಹಿಂದೆ ಜೋಗ ಜಲಪಾತದಲ್ಲಿ ಕೇವಲ ರಾಜ ಜಲಪಾತದ ನೀರು ಈ ರೀತಿ ಮೇಲಕ್ಕೆ ಹೋಗುತ್ತಿತ್ತು. ಆದರೆ ಈ ಬಾರಿ ರಾಜ, ರಾಣಿ, ರೋರರ್, ರಾಕೆಟ್ ಜಲಪಾತದ ನೀರು ಗಾಳಿಯ ರಭಸಕ್ಕೆ ಮೇಲಕ್ಕೆ ಚಿಮ್ಮುತ್ತಿದೆ. ಈ ದೃಶ್ಯ ನೆರೆದಿದ್ದ ಪ್ರವಾಸಿಗರಿಗೆ ಆಶ್ಚರ್ಯ ಚಕಿತರಾಗುವಂತೆ ಮಾಡಿದೆ.
ಕಡಿಮೆ ನೀರಿನ ಪ್ರವಾಹ ಇರೋದರಿಂದ ಗಾಳಿಯ ಒತ್ತಡಕ್ಕೆ ಸಿಲುಕಿದ ನೀರು ಮೇಲೆ ಚಲಿಸದಂತೆ ಕಾಣಿಸಿದೆ. ಗಾಳಿಯ ಜೊತೆ ನೀರಿನ ಕಣಗಳು ಒಡೆದು ಆಗಸದಲ್ಲಿ ಹಾರಿದಂತೆ ಕಾಣಿಸಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ.