ಜೋಗಿ ಪ್ರೇಮ್ ಅವರ ತಾಯಿ 75 ವರ್ಷದ ಭಾಗ್ಯಮ್ಮ ಕಳೆದ ಶುಕ್ರವಾರ ಲುಕೇಮಿಯಾನಿಂದಾಗಿ ಇಹಲೋಕ ತ್ಯಜಿಸಿದ್ದರು. ಕೆಲ ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ತಾಯಿಯ ಜೀವ ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರು ವಿಧಿಯಾಟದ ಮುಂದೆ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿದ್ದವು.. ಇದೀಗ ತಾಯಿಯನ್ನು ನೆನೆದು ಭಾವುಕರಾಗಿರುವ ಪ್ರೇಮ್ ಟ್ವೀಟ್ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ
“ನಾನು ಎಷ್ಟೇ ಹೋರಾಟ ಮಾಡಿದ್ರು ಕೊನೆಗೂ ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಿನ್ನ ಋಣ ತೀರಿಸೋಕೆ ಮತ್ತೆ ನಿನ್ನ ಹೊಟ್ಟೆಯಲ್ಲಿ ಹುಟ್ಟೋಕೆ ನನಗೆ ಒಂದು ಅವಕಾಶ ಮಾಡಿಕೊಡು. ಯಾವತ್ತೂ ಕಾಯ್ತಾಯಿರ್ತಿನಿ. ಮಿಸ್ ಯು ಅಮ್ಮ ” ಎಂದು ಅತ್ಯಂತ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. ಪ್ರೇಮ್ ಅವರ ಈ ಟ್ವೀಟ್ ಎಂತಹವರ ಮನಸನ್ನೂ ಕರಗಿಸುವಂತಿದೆ. ಪ್ರೇಮ್ ಮಾಡಿರುವ ಚಿತ್ರಗಳಲ್ಲಿ ತಾಯಿಯ ಸೆಂಟಿಮೆಂಟ್ಸ್ ಹೆಚ್ಚಾಗಿರುತ್ತದೆ. ಜೋಗಿ , ದಿ ವಿಲನ್ ಚಿತ್ರಗಳು ಇದಕ್ಕೆ ಉದಾಹರಣೆ.