ಕೋವಿಡ್ ನೆರವಿಗಾಗಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನ ಬಿಟ್ಟು ಕೊಟ್ಟ ಜಾನ್ ಅಬ್ರಹಂ..!
ದೇಶದಲ್ಲಿ ಕೊರೊನಾ 2 ನೇ ಅಲೆ ಹಿಂದೆಂದಿಗಿಂತಲೂ ಅತಿ ಭಯಾನಕವಾಗಿ ಭಾರತೀಯರನ್ನ ಕಾಡಲಾರಂಭಿಸಿದೆ. ಅದ್ರಲ್ಲೂ ಕರ್ನಾಟಕದಲ್ಲಿ ಇದರ ಪ್ರಭಾಯ ಅತಿ ಭೀಕರವಾಗಿದೆ. ನಿತ್ಯ ದೇಶದಲ್ಲಿ ಸಾವಿರಾರು ಜನ ಚಿಕಿತ್ಸೆ ಫಲಿಸದೇ , ಆಕ್ಸಿಜನ್ ಕೊರೆತಯಿಂದು ಇನ್ನೂ ಕೆಲವರು ಬೆಡ್ ಸಿಗದೇ ಸಾಯುತ್ತಲೇ ಇದ್ದಾರೆ. ಇದ್ರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ನಡುವೆ ತಾರೆಯರು ಜನರ ಸಹಾಯಕ್ಕೆ ಮುಂದಾಗ್ತಿದ್ದಾರೆ. ಬಾಲಿವುಡ್ ನಟರಾದ ಸೋನು ಸೂದ್ , ಸುನಿಲ್ ಶೆಟ್ಟಿ , ಅಕ್ಷಯ್ ಕುಮಾರ್ , ಸಲ್ಮಾನ್ ಖಾನ್ ಹೀಗೆ ಅನೇಕರು ಬಡವರ ಪಾಲಿಗೆ ದೇವರಾಗಿ ಸಹಾಯ ಮಾಡ್ತಿದ್ದಾರೆ.
ಇದೀಗ ಕೋವಿಡ್ ಪೀಡಿತರ ಸಹಾಯಕ್ಕೆ ಬಾಲಿವುಡ್ ನಟ ಜಾನ್ ಅಬ್ರಹಂ ಕೂಡ ಮುಂದಾಗಿದ್ದು, ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನ ತಾತ್ಕಾಲಿಕವಾಗಿ ಕೋವಿಡ್ ಸೋಂಕಿತರ ನೆರವಿಗಾಗಿ ಬಿಟ್ಟುಕೊಟ್ಟಿದ್ದಾರೆ. ಹೌದು ಜಾನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಅವರು ತಾತ್ಕಾಲಿಕವಾಗಿ ದೇಣಿಗೆ ನೀಡಿದ್ದಾರೆ. ಕೊರೊನಾ ರೋಗಿಗಳಿಗೆ ಅವರ ಕುಟುಂಬದವರಿಗೆ ಸಹಾಯವಾಗಲೆಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು NGOಗಳಿಗೆ ಬಿಟ್ಟುಕೊಟ್ಟಿದ್ದಾರೆ. ಈ ಬಗ್ಗೆ ಪೋಸ್ಟ್ ಬರೆದಿರುವ ಜಾನ್, ‘ಇದು ಬಹಳ ಸಂಕಷ್ಟದ ಸಮಯ. ನಾವೆಲ್ಲರೂ ಕೊರೊನಾದ ವಿರುದ್ಧ ಶಕ್ತಿಮೀರಿ ಹೋರಾಡಬೇಕಿದೆ’ ಎಂದಿದ್ದಾರೆ.
‘ಕೊರೊನಾ ರೋಗಿಗಳಿಗೆ ಅವರ ಕುಟುಂಬದವರಿಗೆ ಶೀಘ್ರವಾಗಿ ನೆರವು ಒದಗಿಸಲು ಮಾಹಿತಿ ತಲುಪಿಸುವ ಕಾರಣದಿಂದ ನನ್ನ ಸಾಮಾಜಿಕ ಜಾಲತಾಣವನ್ನು ಕೆಲವು NGOಳಿಗೆ ಬಿಟ್ಟುಕೊಡುತ್ತಿದ್ದೇನೆ. ನನ್ನ ಸಾಮಾಜಿಕ ಜಾಲತಾಣವು ಕೊರೊನಾ ರೋಗಿಗಳ ಹಾಗೂ ಅವರ ಕುಟುಂಬಕ್ಕೆ ಸಹಾಯ ಮಾಡುವ ಪೋಸ್ಟ್ ಗಳಿಗೆ ಸೀಮಿತವಾಗಿರಲಿದೆ’ ಎಂದಿದ್ದಾರೆ. ಕೊರೊನಾ ರೋಗಿಗಳ ಸಹಾಯಕ್ಕಾಗಿ ಸಾಮಾಜಿಕ ಜಾಲತಾಣಕ್ಕೆ ಸಂದೇಶ ಕಳುಹಿಸಬಹುದು ಎಂದು ಸಹ ಜಾನ್ ಹೇಳಿದ್ದಾರೆ. ಇದು ಕೇವಲ ಆರಂಭವಷ್ಟೆ ಎಂದಿರುವ ಜಾನ್ ಇನ್ನೂ ಹಲವು ರೀತಿಯಲ್ಲಿ ತಾನು ಹಾಗೂ ತನ್ನ NGO ಕೊರೊನಾ ಸಂಕಷ್ಟಕ್ಕೆ ನೆರವಾಗಲಿದ್ದೇವೆ ಎಂದಿದ್ದಾರೆ.
ತೆಲುಗು ಸಿನಿಮಾರಂಗದಲ್ಲಿ ಕನ್ನಡದ ‘ಕಿಸ್’ ಬ್ಯೂಟಿ ಶ್ರೀಲೀಲಾ ಹವಾ..!








