ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ ಜನಾಂಗೀಯ ಘರ್ಷಣೆ ಇಡೀ ವಿಶ್ವದಲ್ಲೇ ಭಾರೀ ಸದದ್ದು ಮಾಡಿತ್ತು. ಇದೀಗ ಅಮೆರಿಕಾದಲ್ಲಿ ನೌಕಾಪಡೆಗೆ ಇದೇ ಮೊದಲ ಬಾರಿಗೆ ಕಪ್ಪು ಜನಾಂಗದ ಮಹಿಳೆ ಯುದ್ಧ ವಿಮಾನದ ಪೈಲಟ್ ಆಗಿ ನೇಮಕಗೊಂಡಿದ್ದು, ಇದೊಂದು ಉತ್ತಮ ಬೆಳವಣಿಗೆ ಎನ್ನಲಾಗುತ್ತಿದೆ.
ಲೆಫ್ಟಿನೆಂಟ್ ಜೆ.ಜಿ. ಮೇಡ್ಲೈನ್ ಸ್ವೀಗಲ್ ಎಂಬಾಕೆ ನೌಕಾಪಡೆ ಶಾಲೆಯಲ್ಲಿ ತರಬೇತಿ ಪೂರ್ಣಗೊಳಿಸಿದ್ದು, ಶೀಘ್ರದಲ್ಲಿ ಫ್ಲೈಟ್ ಆಫೀಸರ್ ಆಗಿ ನೇಮಕಗೊಳ್ಳಲಿದ್ದಾರೆ. ಇವರು 1974ರಲ್ಲಿ ರೋಸ್ಮೇರಿ ಮ್ಯಾರಿನರ್ ಟ್ಯಾಕ್ಟಿಕಲ್ ಫೈಟರ್ ಜೆಟ್ನಲ್ಲಿ ಹಾರಾಟ ನಡೆಸಿದ್ದರು. ಇದೀಗ ಸತತ 45 ವರ್ಷಗಳ ಬಳಿಕ ಮತ್ತೆ ಪೈಲಟ್ ಆಗಿ ಹುದ್ದೆ ನಿರ್ವಹಿಸಲಿದ್ದಾರೆ.








