ಇಂದಿನಿಂದ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. ನಾಲ್ಕು ದಿನ ನಡೆಯಲಿರುವ ಅಧಿವೇಶನದಲ್ಲಿ ಮೊದಲ ದಿನ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಅನಂತರದ ಮೂರು ದಿನಗಳಲ್ಲಿ ರಾಜ್ಯ ಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಣತಂತ್ರ ರೂಪಿಸಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ವಿತರಣಾ ವೈಫಲ್ಯ, ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನುದಾನ ಕಡಿತ, ಗಣಿ ಆರೋಪ ಹೊತ್ತ ಆನಂದ್ ಸಿಂಗ್ ಗೆ ಅರಣ್ಯ ಜವಾಬ್ದಾರಿ, ಸಿಎಎ ವಿರೋಧಿಸಿ ಮಂಗಳೂರು ಗಲಭೆ, ಗೋಲಿಬಾರ್ ಮುಂತಾದ ಹಲವು ವಿಚಾರಗಳು ವಿಪಕ್ಷದ ಆಸ್ತ್ರದಲ್ಲಿದ್ದು, ಅದಕ್ಕೆ ಸರಿಯಾದ ತಿರುಗೇಟು ನೀಡಲು ಆಡಳಿತ ಪಕ್ಷ ಬಿಜೆಪಿ ಕೂಡ ಸಜ್ಜಾಗಿದೆ.
ಈಗಾಗಲೇ ಸಿಎಂ ಬಿ.ಎಸ್.ವೈ. ಇಲಾಖಾವಾರು ಬಜೆಟ್ ಪೂರ್ವಭಾವಿ ಚರ್ಚೆ ನಡೆಸಿದ್ದು, ಅರ್ಥಿಕ ಸ್ಥಿತಿಯ ಬಗ್ಗೆ ಅಂಕಿಅಂಶ ಸಂಗ್ರಹಿಸಿದ್ದಾರೆ. ಅಲ್ಲದೆ ಸಂಬಂಧ ಪಟ್ಟ ಇಲಾಖೆಗಳ ಸಚಿವರಿಗೂ ವಿಪಕ್ಷದ ಆರೋಪಗಳಿಗೆ ಸರಿಯಾದ ತಿರುಗೇಟು ನೀಡಲು ಸೂಚನೆ ನೀಡಿದ್ದಾರೆ.