“ಜೋಕೆ ಜೋಕೆ ಮೇಕೆ… ಹೆಬ್ಬುಲಿ ಹಾಕಿದೆ ಕೇಕೆ”..! ಪುಷ್ಪಾ ಕನ್ನಡ ವರ್ಷನ್ ಹಾಡು ಸೂಪರ್…!
ಜೋಕೆ ಜೋಕೆ ಮೇಕೆ… ಹೆಬ್ಬುಲಿ ಹಾಕಿದೆ ಕೇಕೆ… ಅಬ್ಬಬ್ಬಾ ಏನ್ ಸಾಂಗ್ , ಎಂಥಾ ಅದ್ಭುತ ಲೊಕೇಶನ್ … ಓ ಮೈ ಗಾಡ್ ಎನಿಸುವಂತಹ ಬಿಜಿಎಂ , ಮೈಝಂ ಎನಿಸುವ ಸೆಟ್ , ಟೆರರ್ ಲುಕ್ ನಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಖತ್ ಸಾಂಗ್ … ವಿಜಯ್ ಪ್ರಕಾಶ್ ಅದ್ಭುತ ವಾಯ್ಸ್.. ಬೀಟ್ಸ್ ಗೆ ಅಲ್ಲು ಭರ್ಜರಿ ಸ್ಟೆಪ್ಸ್.. ಇದು ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಪುಷ್ಟಾ ಸಿನಿಮಾ ರಿಲೀಸ್ ಮಾಡಿರುವ ಹೊಸ ಹಾಡಿನ ಕನ್ನಡ ವರ್ಷನ್ ನ ಕಮಾಲ್..
ಶೀಘ್ರದಲ್ಲೇ ಹಸೆಮಣೆ ಏರುತ್ತಿರೋದಾಗಿ ತಿಳಿಸಿದ ನಯನತಾರಾ
ಹೌದು.. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಕನ್ನಡ ವರ್ಷನ್ ನ ಜೋಕೆ ಜೋಕೆ ಮೇಕೆ ಸಾಂಗ್… ಹೆಬ್ಬುಲಿ ಹಾಕಿದೆ ಕೇಕೆ ಹಾಡು ಈಗ ಸಖತ್ ಟ್ರೆಂಡ್ ಆಗ್ತಿದೆ. ವರದರಾಜ್ ಲಿರಿಕ್ಸ್ ಗೆ , ವಿಜಯ್ ಪ್ರಕಾಶ್ ಧ್ವನಿಗೆ ಕನ್ನಡಾಭಿಮಾನಿಗಳು ಸಹ ಕೇಕೆ ಹಾಕುತ್ತಾ ಅಲ್ಲು ಲುಕ್ಸ್ ವಾವ್ ಅನ್ನುತ್ತಾ ಸಾಂಗ್ ಗೆ ಫಿದಾ ಆಗಿದ್ದಾರೆ.. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಈ ಸಾಂಗ್ ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಲಕ್ಷಾಂತರ ವೀವ್ಸ್ , ಸಾವಿರಾರು ಲೈಕ್ಸ್ ಕಮೆಂಟ್ ಗಳನ್ನ ಪಡೆದುಕೊಂಡು ಯೂಟ್ಯೂಬ್ ನಲ್ಲಿ ಹವಾ ಸೃಷ್ಟಿಸಿದೆ. ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಹಾಡು ರಿಲೀಸ್ ಆಗಿದೆ. ಕನ್ನಡಿಗರಂತು ಕಮೆಂಟ್ ಗಳ ಮೂಲಕ ಅಲ್ಲುಗೆ ವಿಶ್ ಮಾಡುತ್ತಾ ಸಾಂಗ್ ಬಗ್ಗೆ ಒಳ್ಳೊಯ ರಿವೀವ್ ಕೊಡ್ತಾ ಇದ್ದಾರೆ.. ಸಿನಿಮಾ ಸೂಪರ್ ಹಿಟ್ ಆಗ್ಲಿ ಅಂತ ಆಶಯ ವ್ಯಕ್ತಪಡಿಸುತ್ತಿದ್ದಾರೆ.
ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ಸಿನಿಮಾದಲ್ಲಿ ‘ಕಿರಿಕ್ ರಾಣಿ’ ರಷ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ..








