ತಮಿಳಿನ ಖ್ಯಾತ ನಟಿ ಜ್ಯೋತಿಕ ನುಡಿದಂತೆ ನಡೆದುಕೊಂಡಿದ್ದಾರೆ. ತಂಜಾವೂರ್ ನ ಸರ್ಕಾರಿ ಆಸ್ಪತ್ರೆಯ ಪರಿಸ್ಥಿತಿ ಬಗ್ಗೆ ಮಾತನಾಡಿ ಕೆಲ ದಿನಗಳ ಕಾಲ ಕಾಲ ಟ್ರೋಲ್ ಆಗಿದ್ದ ಜೋತಿಕಾ ಅವರು ಅದೇ ಆಸ್ಪತ್ರೆಗೆ ಈಗ 25ಲಕ್ಷ ರೂಪಾಯಿ ದೇಣಿಗೆ ನೀಡಿ ಜನರ ಮನಗೆದ್ದಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಸಮಾರಂಭವೊಂದರಲ್ಲಿ ಮಾತನಾಡಿದ್ದ ಜೋತಿಕಾ ಅವರು ತಂಜಾವೂರ್ ದೇವಸ್ಥಾನವನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳಲಾಗಿದೆ. ಆದರೆ ತಂಜಾವೂರ್ನ ಸರ್ಕಾರಿ ಆಸ್ಪತ್ರೆ ಕೆಟ್ಟದಾಗಿದೆ. ಅಲ್ಲಿ ಕಿಂಚಿತ್ತೂ ಶುಚಿತ್ವ ಇಲ್ಲ ಎಂದಿದ್ದರು. ಅವರ ಭಾಷಣದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೇ ಜೋತಿಕಾ ಅವರು ಮಂದಿರವನ್ನು ಅವಮಾನಿಸಿಬಿಟ್ರಾ ಎಂಬ ಅನುಮಾನಗಳು ಶುರುವಾಗಿತ್ತು. ಕೆಲ ದಿನಗಳ ವರೆಗೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಇದೀಗ ಅವರು ತಂಜಾವೂರ್ನ ಸರ್ಕಾರಿ ಆಸ್ಪತ್ರೆಯ ಆಧುನಿಕರಣಕ್ಕಾಗಿ ಲಕ್ಷಾಂತರ ರೂಪಾಯಿಗಳ ದೇಣಿಗೆ ನೀಡಿದ್ದಾರೆ. ಜ್ಯೋತಿಕಾ ಪತಿ ಸೂರ್ಯ ಅವರ ಅಗರಂ ಫೌಂಡೇಶನ್ನ ಮೂಲಕ ದೇಣಿಗೆಯನ್ನು ತಮಿಳುನಾಡಿದ ಆರೋಗ್ಯ ಸಚಿವರಾದ ವಿಜಯ್ ಭಾಸ್ಕರ್ ಅವರಿಗೆ ಹಸ್ತಾಂತರಿಸಲಾಗಿದೆ.
ಆಸ್ಪತ್ರೆಗೆ ಆಧುನಿಕ ಯಂತ್ರೋಪಕರಣಗಳನ್ನು ಖರೀದಿಸುವ ಜೊತೆಗೆ, ಪೇಯಿಂಟ್, ಸ್ವಚ್ಛತೆ ಆಧುನಿಕ ಶೌಚಾಲಯಗಳು ಸೇರಿ ಇತರೇ ಅಭಿವೃದ್ಧಿ ಕಾರ್ಯಗಳಿಗೆ ಈ ಹಣವನ್ನು ಬಳಕೆ ಮಾಡಲಾಗುತ್ತೆ.ಇನ್ನೂ ಈ ಹಿಂದೆ ಅವರ ಭಾಷಣದ ತುಣುಕು ವೈರಲ್ ಆದಂತಹ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದ ಜ್ಯೋತಿಕಾ ಅವರು ಆಸ್ಪತ್ರೆ ಅಭಿವೃದ್ಧಿಗೆ ದೇಣಿಗೆ ನೀಡುವುದಾಗಿ ಮಾತು ಕೊಟ್ಟಿದ್ದು, ಇದೀಗ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.








