ಪತ್ರಕರ್ತ ಚಂದನ್ ಮಿತ್ರ ನಿಧನ – ಪ್ರಧಾನಿ ಮೋದಿ ಸಂತಾಪ
ಪತ್ರಕರ್ತ ಮತ್ತು ಮಾಜಿ ರಾಜ್ಯಸಭಾ ಸಂಸದರಾದ ಚಂದನ್ ಮಿತ್ರ ಅವರು ನಿಧನರಾಗಿದ್ದಾರೆ.
ನಿನ್ನೆ ತಡರಾತ್ರಿ ಮಿತ್ರ ನಿಧನರಾದರು ಎಂದು ಅವರ ಮಗ ಕುಶನ್ ಮಿತ್ರ ಟ್ವೀಟ್ ಮಾಡಿ ಮಾಹಿತಿ ತಿಳಿಸಿದ್ದಾರೆ.
ಕೆಲ ಸಮಯದಿಂದ ಚಂದನ್ ಮಿತ್ರ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು, ಇದೀಗ ಕೊನೆಯುಸಿರೆಳೆದಿದ್ದಾರೆ.
ಇನ್ನೂ ಮಿತ್ರಾ ಅವರ ಅಗಲಿಕೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ಮಾಡಿರುವ ನಮೋ ಶ್ರೀ ಚಂದನ್ ಮಿತ್ರ ಜೀ ಅವರು, ಅವರ ಬುದ್ಧಿಶಕ್ತಿ ಮತ್ತು ಒಳನೋಟಗಳಿಂದ ಸದಾ ನೆನಪಿನಲ್ಲಿ ಉಳಿಯುತ್ತಾರೆ.
ಅವರು ಮಾಧ್ಯಮ ಹಾಗೂ ರಾಜಕೀಯ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದವರು.
ಅವರ ಕುಟುಂಬಕ್ಕೆ ದುಃಖ ಭರಸಿವ ಶಕ್ತಿಯನ್ನು ಆ ದೇವರು ನೀಡಲಿ, ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.








