IPL | ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ಈ ಬೆಡಗಿ ಯಾರು..?
ಎರಡು ದಿನಗಳ ಐಪಿಎಲ್ ಮೆಗಾ ಹರಾಜು ಯಶಸ್ವಿಯಾಗಿದೆ. ಕೆಲ ಆಟಗಾರರು ಜಾಕ್ ಪಾಟ್ ಪಡೆದರೆ.. ಇನ್ನು ಕೆಲವರಿಗೆ ನಿರಾಸೆಯಾಗಿದೆ.
ಆದರೆ, ಈ ಬಾರಿ ಹರಾಜಿನಲ್ಲಿ ಆಟಗಾರರ ಜತೆಗೆ 19 ವರ್ಷದ ಯುವತಿಯೂ ವಿಶೇಷ ಆಕರ್ಷಣೆಯಾಗಿದ್ದಳು.
ಸೌಂದರ್ಯ ಮತ್ತು ಅಭಿನಯದ ಮೂಲಕ ಹರಾಜಿನಲ್ಲಿ ಎಲ್ಲರ ಗಮನ ಸೆಳೆದಿದ್ದಳು.
ಟಿವಿಯಲ್ಲಿ ಆಕೆಯನ್ನ ನೋಡಿದ ಕೆಲವರು ಆಕೆ ಯಾರು ಅಂತಾ ಯೋಚಿಸಿದ್ರೆ ಇನ್ನು ಕೆಲವರು ಆಕೆಯನ್ನ ಗುರುತಿಸಿದ್ದಾರೆ.
ಅಂದಹಾಗೆ ಆ ಬೆಡಗಿ ಜಾಹ್ನವಿ ಮೆಹ್ತಾ. ಕೋಲ್ಕತ್ತಾ ತಂಡದ ಸಹ ಮಾಲೀಕ ಜೂಹಿ ಚಾವ್ಲಾ ಅವರ ಪುತ್ರಿ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್, ಪುತ್ರಿ ಸುಹಾನಾ ಅವರೊಂದಿಗೆ ಹರಾಜಿನಲ್ಲಿ ಜೂಹಿ ಚಾವ್ಲಾ ಪುತ್ರಿ ಜಾಹ್ನವಿ ಮೆಹ್ತಾ ಭಾಗಿಯಾಗಿದ್ದರು.
ಅವರಿಬ್ಬರಿಗಿಂತ ತುಸು ಕಲರ್ ಕಡಿಮೆಯಾಗಿದ್ದರೂ, ನೋಡಲು ಆಕರ್ಷಕವಾಗಿದ್ದರು.
ಎರಡು ವರ್ಷಗಳ ಹಿಂದೆ ನಡೆದ ಐಪಿಎಲ್ ಹರಾಜಿನಲ್ಲಿಯೂ ಜಾಹ್ನವಿ ಭಾಗವಹಿಸಿದ್ದರು. ತಾಯಿ ಜೂಹ್ಲಿ ಚಾವ್ಲಾ ಸಹಾಯವಿಲ್ಲದೆ.. ಕೋಲ್ಕತ್ತಾ ನೈಟ್ ರೈಡರ್ಸ್ ಹರಾಜಿನಲ್ಲಿ ಜಾಹ್ನವಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.









