ಜೂನ್ 21ರ ಸೂರ್ಯ ಗ್ರಹಣ ಕೊರೊನಾ ವೈರಸ್ ನಾಶಗೊಳಿಸುವ ಸಾಧ್ಯತೆ ??
ಚೆನ್ನೈ, ಜೂನ್ 17: ಚೆನ್ನೈನ ವಿಜ್ಞಾನಿಯೊಬ್ಬರು ಕೊರೊನಾ ವೈರಸ್ ನ ಉಗಮ ಮತ್ತು 2019 ಡಿಸೆಂಬರ್ 26 ರಂದು ಸಂಭವಿಸಿದ ಸೂರ್ಯ ಗ್ರಹಣಕ್ಕೆ ಸಂಬಂಧವಿದೆಯೆಂದು ಹೇಳಿದ್ದಾರೆ.
ಪರಮಾಣು ಹಾಗೂ ಭೂ ವಿಜ್ಞಾನಿ ಡಾ. ಕೆ.ಎಲ್ ಸುಂದರ್ ಕೃಷ್ಣಾ ಅವರ ಅಭಿಪ್ರಾಯದ ಪ್ರಕಾರ ಡಿಸೆಂಬರ್‌ನಲ್ಲಿ 26 ರ ಸೂರ್ಯ ಗ್ರಹಣದಂದು ಹೊರಹೊಮ್ಮಿದ ಗ್ರಹಣ ಸಂದರ್ಭದಲ್ಲಿ ಉಂಟಾದ ಅಣುವಿನ ನಡುವಣ ಸಮ್ಮಿಲನ ಶಕ್ತಿ( ವಿದಳನ ಶಕ್ತಿ) ಕೊರೊನಾ ವೈರಸ್ ನ ಉಗಮಕ್ಕೆ ಕಾರಣವಾಗಿರಬಹುದು.
ಜೂನ್ 21 ರಂದು ಸಂಭವಿಸುವ ಸೂರ್ಯಗ್ರಹಣದಂದು ಸೂರ್ಯನ ಕ್ಷಕಿರಣಗಳ ತೀವ್ರತೆಯು ಕೊರೊನಾ ವೈರಸ್ ಅನ್ನು ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಈ ಮೊದಲು ಅಂದರೆ 2019ರ ಡಿಸೆಂಬರ್ 26 ರಂದು ನಡೆದ ಸೂರ್ಯ ಗ್ರಹಣದ ಬಳಿಕ ಕೊರೊನಾ ವೈರಸ್ ಮಾನವ ಸಂಕುಲವನ್ನು ನಾಶ ಪಡಿಸುವತ್ತ ಸಾಗಿದೆ. ಸೂರ್ಯಗ್ರಹಣದ ಬಳಿಕ ಸೌರಮಂಡಲದಲ್ಲಿ ಗ್ರಹಗಳ ಹೊಸ ಜೋಡಣೆಯಾಗಿದ್ದು, ಚೀನಾದಲ್ಲಿ ಪ್ರಪ್ರಥಮವಾಗಿ ರೂಪಾಂತರ ಪ್ರಕ್ರಿಯೆಯು ಕಂಡು ಬಂದಿರಬಹುದು.
ಕೊರೊನಾ ವೈರಸ್ ಗ್ರಹಗಳ ಸಂರಚನೆಯಿಂದ ಉಂಟಾಗಿರುವ ನೈಸರ್ಗಿಕ ಪ್ರಕ್ರಿಯೆಯಾಗಿದ್ದರೆ, ಸೂರ್ಯನ ಕಿರಣ ಮತ್ತು ಸೂರ್ಯಗ್ರಹಣ ಈ ವೈರಸ್ ಗೆ ನೈಸರ್ಗಿಕ ಪರಿಹಾರವಾಗಿದೆ ಎಂದು ವಿವರಿಸಿದ್ದಾರೆ. ಜೂನ್ 21 ರಂದು ಸೂರ್ಯಗ್ರಹಣ ನಡೆಯಲಿದ್ದು, ಬೆಳಗ್ಗೆ 9.15ಕ್ಕೆ ಗ್ರಹಣ ಸಂಭವಿಸಲಿದೆ. ಮಧ್ಯಾಹ್ನ 12.10 ಗ್ರಹಣ ಮಧ್ಯಕಾಲ, ಮಧ್ಯಾಹ್ನ 3.04 ಗ್ರಹಣ ಅಂತ್ಯಕಾಲವಾಗಿದೆ. ಸೂರ್ಯಗ್ರಹಣದ ಸಂದರ್ಭದಲ್ಲಿ ಹೊರಸೂಸಿದ ವಿದಳನ ಶಕ್ತಿಯಿಂದ ಮೊದಲ ನ್ಯೂಟ್ರಾನ್ ನ ರೂಪಾಂತರಿತ ಕಣಗಳು ಪರಸ್ಪರ ಕ್ರಿಯೆಯ ಬಳಿಕ ಕೊರೊನಾ ವೈರಸ್ ಅನ್ನು ಹರಡಲು ಪ್ರಾರಂಭಿಸಿದ್ದು, ಮುಂದಿನ ಸೂರ್ಯ ಗ್ರಹಣವು ಹೊರ ಸೂಸುವ ಸೂರ್ಯನ ಕ್ಷಕಿರಣಗಳ ತೀವ್ರತೆಯಿಂದ ವೈರಸ್‌ನ್ನು ನಿಷ್ಕ್ರಿಯಗೊಳ್ಳಬಹುದು ಎಂದು ಡಾ. ಕೆ.ಎಲ್ ಸುಂದರ್ ಕೃಷ್ಣಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.