ಜ್ಯೂನಿಯರ್ NTR ಗೆ ನಾಯಕಿಯಾಗಲಿರುವ ಆಲಿಯಾ..!!
ಪ್ರಸ್ತುತ ದೇಶಾದ್ಯಂತ ಸಂಚಲನ ಸೃಷ್ಟಿಸಿರು RRR ಸಿನಿಮಾದಲ್ಲಿ ಜ್ಯೂ. NTR , ರಾಮ್ ಚರಣ್ , ಬಾಲಿವುಡ್ ನಟಿ ಆಲಿಯಾ ಭಟ್ , ನಟ ಅಜಯ್ ದೇವಗನ್ , ಶ್ರೀಯಾ ಶರಣ್ ಸೇರಿದಂತೆ ಸ್ಟಾರ್ ನಟರ ದಂಡೇ ಇದೆ..
ಈ ಸಿನಿಮಾದಲ್ಲಿ ಸೀತ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆಲಿಯಾ ಭಟ್ ರಾಮಚರಣ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.. ಆದ್ರೆ ಸಂದರ್ಶನಗಳಲ್ಲಿ ಆಲಿಯಾಗೆ ತಾರಕ್ ಜೊತೆಗೆ ಹೆಚ್ಚು ಒಡನಾಟವಿದ್ದು , ಆಲಿಯಾ ತಾರಕ್ ಬಗ್ಗೆ ಹೆಚ್ಚು ಮಾತನಾಡ್ತಾರೆ.. ಆ ಸಂದರ್ಭದಲ್ಲಿ ಅಭಿಮಾನಿಗಳು ಆಲಿಯಾ ಹಾಗೂ ಜ್ಯೂನಿಯರ್ NTR ಮುಂದಿನ ಸಿನಿಮಾದಲ್ಲಿ ಒಟ್ಟಾಗಬೇಕೆಂದು ಆಸೆ ಪಟ್ಟಿದ್ದರು..
ಅದ್ರಂತೆಯೇ ಈಗ ತಾರಕ್ ಹಾಗೂ ಆಲಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.. ಜ್ಯೂನಿಯರ್ NTR ಸಿನಿಮಾದಲ್ಲಿ ಆಲಿಯಾ ಭಟ್ ಅವರೇ ನಾಯಕಿ ಎನ್ನುವುದು ಪಕ್ಕಾ ಎನ್ನಲಾಗ್ತಿದೆ.. ಅಲ್ಲದೇ ಈ ಬಗ್ಗೆ ಆಗ್ಲೇ ಚರ್ಚೆಯೂ ನಡೆದಿದ್ದು,, ಆಲಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ..
ಜೂ ಎನ್‌ಟಿಆರ್ ನಟನೆಯ 30ನೇ ಸಿನಿಮಾ ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ಇದೇ ಸಿನಿಮಾಗೆ ಆಲಿಯಾ ಭಟ್ ನಾಯಕಿಯಾಗಲಿದ್ದಾರೆ. ಪ್ರಸ್ತುತ ಆಲಿಯಾ ಭಟ್ ಕೂಡ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.. ಅವರ ನಟನೆಯ ಗಂಗೂಭಾಯಿ ಕಾಥೇಯವಾಡಿ , ಬ್ರಹ್ಮಾಸ್ತ್ರ ಸಿನಿಮಾಗಳು ರಿಲೀಸ್ ಆಗಬೇಕಿದೆ..ಇದರ ಹೊರತಾಗಿ ಪ್ರಿಯಾಂಕಾ ಚೋಪ್ರಾ ಅವರ ಜೊತೆಗೆ ಝೀ ಲೇ ಝರಾ ಹೊಸ ಸಿನಿಮಾದಲ್ಲಿ ನಟಿಸಬೇಕಿದೆ.. ನಂತರ ರಾಖಿ ಔರ್ ರಾಣಿ ಕೀ ಪ್ರೇಮ್ ಕಹಾನಿ , ಸಲ್ಮಾನ್ ಖಾನ್ ಜೊತೆಗೆ ಇನ್ ಶಾ ಅಲ್ಲಾಹ್, ತಕ್ತ್ , ಆಶಿಖಿ 3 ಸಿನಿಮಾದಲ್ಲಿ ಆಲಿಯಾ ನಟಿಸಲಿದ್ದಾರೆ.