ನಿಮ್ಮ ಸೈನ್ಯವನ್ನು ಸೇರಿಕೊಳ್ಳಲು ಬಹಳ ಕಾತುರನಾಗಿದ್ದೇನೆ – ಜೂ.NTR
ಬೆಂಗಳೂರು : ಸ್ಯಾಂಡಲ್ ವುಡ್ ನ ಕಿಂಗ್ ಮೇಕರ್ ಉಗ್ರಂ , KGF ಸಿನಿಮಾಗಳ ಸಾರಥಿ… ಸದ್ಯಕ್ಕೆ ನ್ಯಾಷನಲ್ ಸ್ಟಾರ್ ಬಾಹುಬಲಿ ಪ್ರಭಾಸ್ ಜೊತೆ ಪ್ಯಾನ್ ಇಂಡಿಯಾ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಭಾರತದ ಸ್ಟಾರ್ ನಿರ್ದೇಶಕನಾಗಿ ಹೊರಹೊಮ್ಮಿರುವ ಪ್ರಶಾಂತ್ ನೀಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಈ ಹಿನ್ನೆಲೆ ನಿರ್ದೆಶಕ ಪ್ರಶಾಂತ್ ನೀಲ್ಗೆ ಸ್ಯಾಂಡಲ್ ವುಡ್ ಹಾಗೂ ಇತರೇ ಬಾಷೆಯ ತಾರೆಯರು , ಸಿನಿಮಾರಂಗದವರು , ನೆಟ್ಟಿಗರು ವಿಷ್ ಮಾಡ್ತಾಯಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಕೆಜಿಎಫ್ ಸಿನಿಮಾವನ್ನು ನಿರ್ದೇಶಿಸಿ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ನೋಡುವಂತೆ ಮಾಡಿದವರು ಪ್ರಸಾಂತ್ ನೀಲ್.. ಇದಕ್ಕೆ ಬಂಡವಾಳ ಹೂಡಿದ್ದು ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್.. ಇದೀಗ ಪರ ಭಾಷೆಯ ದೊಡ್ಡ ದೊಡ್ಡ ಸ್ಟಾರ್ ನಟರು ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ.. ಇದಕ್ಕೆ ಉತ್ತಮ ಉದಾಹರಣೆ ಪ್ರಭಾಸ್ ನಟನೆಯ ಸಲಾರ್..
ಇದೀಗ ಈ ವಿಶೇಷ ದಿನದಂದು ಟಾಲಿವುಡ್ ನ ಯಂಗ್ ಟೈಗರ್ ಜ್ಯೂನಿಯರ್ ಎನ್ಟಿಆರ್ ಪ್ರಶಾಂತ್ ನೀಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಎಂದಿಂಗೂ ಖುಷಿಯಾಗಿರಿ, ನಿಮ್ಮ ಸೈನ್ಯವನ್ನು ಸೇರಿಕೊಳ್ಳಲು ಬಹಳ ಕಾತುರನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.