ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಟಾಲಿವುಡ್ ನಟ ಜ್ಯೂ. NTR
ಟಾಲಿವುಡ್ ನ ಸ್ಟಾರ್ ನಟ ಜ್ಯೂ. NTR ಅವರು ವ್ಯಾಯಾಮದ ವೇಳೆ ಗಾಯಗೊಂಡು ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ವೇಳೆ ಜೂ.ಎನ್‌ಟಿಆರ್ ಬೆರಳ ಮೂಳೆ ಮುರಿತವಾಗಿತ್ತು. ಅದರ ನೋವು ಹೆಚ್ಚಾದ ಕಾರಣ ಈಗ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ. ಹೈದರಾಬಾದ್‌ನಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಜೂ ಎನ್‌ಟಿಆರ್ ದಾಖಲಾಗಿ ಒಂದೇ ದಿನದಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ. ಜೂ.ಎನ್‌ಟಿಆರ್‌ಗೆ ಕೈ ಬೆರಳುಗಳಿಗೆ ಆಪರೇಷನ್ ಮಾಡಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೆ ಜೂ.ಎನ್‌ಟಿಆರ್ ಅವರು ಪುನೀತ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದರು. ಪುನೀತ್ ಹಾಗೂ ಜೂ ಎನ್‌ಟಿಆರ್ ಆಪ್ತ ಗೆಳೆಯರಾಗಿದ್ದರು. ಅಪ್ಪುಗಾಗಿ ‘ಗೆಳೆಯ-ಗೆಳೆಯ’ ಹಾಡನ್ನು ಜೂ.ಎನ್‌ಟಿಆರ್ ಹಾಡಿದ್ದರು. NTR ಹಾಗೂ ರಾಮಚರಣ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ‘RRR’ ಸಿನಿಮಾ ಜನವರಿ 07ಕ್ಕೆ ಬಿಡುಗಡೆ ಆಗಲಿದೆ.