ಟಾಲಿವುಡ್ ನ ಸ್ಟಾರ್ ನಟ ಜ್ಯೂ. NTR ಗೆ ಕೊರೊನಾ ಪಾಸಿಟಿವ್
ಟಾಲಿವುಡ್ ನ ಯಂಗ್ ಟೈಗರ್ , ಜ್ಯೂ. NTRಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಈ ವಿಚಾರವನ್ನ ಖುದ್ದು, ಜ್ಯೂ. NTR ಅವರೇ ಟ್ವಿಟ್ಟರ್ ಮೂಲಕ ಖಚಿತ ಪಡಿಸಿದ್ದಾರೆ. ಅಲ್ಲದೇ ‘ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಆತಂಕಪಡುವ ಅಗತ್ಯವಿಲ್ಲ. ನಾನು ಆರಾಮಾಗಿದ್ದೇನೆ. ಕೊರೊನಾ ನಿಯಮಗಳನ್ನು ಪಾಲಿಸುತ್ತಿದ್ದು, ನಾನು ಮತ್ತು ನನ್ನ ಕುಟುಂಬ ಐಸೋಲೆಟ್ ಆಗಿದ್ದೇವೆ. ದಯವಿಟ್ಟು ನನ್ನ ಸಂಪರ್ಕಕ್ಕೆ ಬಂದಿದ್ದವರು ಕೂಡಲೇ ಪರೀಕ್ಷಿಸಿಕೊಳ್ಳಿ’ ಎಂದು ಬರೆದುಕೊಂಡಿದ್ಧಾರೆ.
NTRಗೆ ಕೋವಿಡ್ ಪಾಸಿಟಿವ್ ಬಂದ ವಿಚಾರ ತಿಳಿದ ನಂತರ ಅಭಿಮಾನಿಗಳು ಹಾಗೂ ಚಿತ್ರರಂಗದ ಸೆಲೆಬ್ರಿಟಿಗಳು ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ಅಂದ್ಹಾಗೆ ನಟ ರಾಮ್ ಚರಣ್ ತೇಜ, ಅಲ್ಲು ಅರ್ಜುನ್ ಸೇರಿದಂತೆ ಸೋಂಕು ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನ ಅನೇಕ ತಾರೆಯರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ನಿಧಾನವಾಗಿ ಚೇತರಿಸಿಕೊಳ್ತಿದ್ದಾರೆ. ಈ ಕೋವಿಡ್ ಮಹಾಮಾರಿಗೆ ಸಿನಿಮಾರಂಗದ ಅನೇಕ ಗಣ್ಯರು ಇಹಕಲೋಕ ತ್ಯಜಿಸಿದ್ಧಾರೆ. ಅನ್ನೂ ಅನೇಕರು ತಮ್ಮವರನ್ನ ಕಳೆದುಕೊಂಡ ದುಃಖದಲ್ಲಿದ್ದಾರೆ.