ಜೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಲಕ್ಷ್ಮೀ ನಾರಾಯಣ್ ನಿಧನ….
ಜೂನಿಯರ್ ರವಿಚಂದ್ರನ್ ಎಂದೇ ಖ್ಯಾತಿ ಪಡೆದಿದ್ದ ಕಲಾವಿದ ಲಕ್ಷ್ಮೀ ನಾರಾಯಣ್ ವಿದ್ಯುತ್ ಸ್ಪರ್ಶಿಸಿ ಅಕಾಲಿಕವಾಗಿ ಮೃತಪಟ್ಟಿದ್ಧಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿಯ ಹೇರೂರು ಗ್ರಾಮದ ಲಕ್ಷ್ಮೀ ನಾರಾಯಣ್ (35) ನಿನ್ನೆ ಮಂಗಳವಾರ ತಮ್ಮ ಮನೆಯಲ್ಲಿರುವ ಸಂಪ್ ಗೆ ನೀರು ಬಿಡಲು ಮೋಟರ್ ಸ್ವಿಚ್ ಒತ್ತಿದ್ದಾರೆ, ಈ ವೇಳೆ ಕರೆಂಟ್ ಶಾಕ್ ನಿಂದ ಲಕ್ಷ್ಮೀ ನಾರಾಯಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲಕ್ಷ್ಮೀ ನಾರಾಯಣ್ ರಾಜ್ಯದೆಲ್ಲೆಡೆ ಸಂಗೀತ ಸಂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಾಡು ಹೇಳಿ ಜನರನ್ನು ರಂಜಿಸುತ್ತಿದ್ದರು. ಜೊತೆಗೆ ರವಿಚಂದ್ರನ್ ಅವರಂತೆಯೇ ಕಾಣುತ್ತಿದ್ದ ಅವರು ರವಿಚಂದ್ರನ್ ಅಭಿನಯದ ದೃಶ್ಯಗಳನ್ನು ವೇದಿಕೆ ಮೇಲೆ ಅಭಿನಯಿಸುವ ಮೂಲಕ ಜನರ ಮನಗೆದ್ದಿದ್ದರು.
ಲಕ್ಷ್ಮಿ ನಾರಾಯಣ್ ಸಹ ರವಿಚಂದ್ರನ್ ಅವರ ರೀತಿಯಲ್ಲಿಯೇ ವೇಷಭೂಷಣ ಧರಿಸಿಕೊಳ್ಳುತ್ತಿದ್ದರು. ರವಿಚಂದ್ರನ್ ಅವರ ಸೂಪರ್ ಹಿಟ್ ಸಿನಿಮಾಗಳ ಪಾತ್ರಗಳ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದರು.
Junior Ravichandran fame artist Lakshmi Narayan passes away








