ಯಡಿಯೂರಪ್ಪ ಹುಲಿ ಇದ್ದಂತೆ.. ಹುಲಿಗೆ ಸ್ಥಾನಮಾನ ಬೇಕಿಲ್ಲ : ಈಶ್ವರಪ್ಪ Yeddyurappa saaksha tv
ಕಲಬುರಗಿ : ಬಿ.ಎಸ್. ಯಡಿಯೂರಪ್ಪ ಹುಲಿ ಇದ್ದ ಹಾಗೆ. ಹುಲಿಗೆ ಯಾವುದೇ ಸ್ಥಾನಮಾನದ ಅವಶ್ಯಕತೆ ಇಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಅವರನ್ನು ಪಕ್ಷದಲ್ಲಿ ಸೈಡ್ ಲೈನ್ ಮಾಡಲಾಗುತ್ತಿದೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.
ಈ ವಿಚಾರವಾಗಿ ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಈಶ್ವರಪ್ಪ, ಯಾರೋ ಕೆಲ ತಲೆಹರಟೆಗಳಿಗೆ ಆ ರೀತಿಯ ಭಾವನೆ ಬಂದಿದೆ.
ಯಡಿಯೂರಪ್ಪ ಹುಲಿ ಇದ್ದ ಹಾಗೆ. ಹುಲಿಗೆ ಯಾವುದೇ ಸ್ಥಾನಮಾನದ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಇದೇ ವೇಳೆ ನಿರಾಣಿ ಮುಖ್ಯಮಂತ್ರಿ ಆಗಬೇಕು ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಈಶ್ವರಪ್ಪ, ನಾನು ನಿರಾಣಿ ಅವರು ಸಿಎಂ ಆಗ್ಲಿ ಅಂತಾ ಹೇಳಿದ್ದು ಈ ಅವಧಿಗಲ್ಲ.
ಮುಂದಿನ ದಿನದಲ್ಲಿ ನಿರಾಣಿ ಸಿಎಂ ಆಗಬೇಕು ಅಂತಾ ಹೇಳಿದ್ದೇನೆ ಅಷ್ಟೇ. ಈ ಅವಧಿ ಮುಗಿಯೋವರೆಗೆ ಬೊಮ್ಮಾಯಿ ಅವರೇ ಸಿಎಂ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.









