Telangana: ಇನ್ನೂ 13 ತಿಂಗಳಷ್ಟೇ ನಿಜಾಮರ ಆಳ್ವಿಕೆ – ಅಸಾದುದ್ದೀನ್ ಗೆ ಗುರಿಯಾಗಿಸಿ ಅಮಿತ್ ಶಾ ಹೇಳಿಕೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಹೈದರಾಬಾದ್ಗೆ ಭೇಟಿ ನೀಡಿದ್ದಾರೆ. ಇಲ್ಲಿ ತೆಲಂಗಾಣ ವಿಮೋಚನಾ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು, ಆದರೆ ಹೈದರಾಬಾದ್ ಇನ್ನೂ ನಿಜಾಮರ ಆಳ್ವಿಕೆಯಲ್ಲಿದೆ. ಇದನ್ನು ಇಲ್ಲಿನ ಜನರು ಇನ್ನು 13 ತಿಂಗಳು ಮಾತ್ರ ಭರಿಸಬೇಕಾಗುತ್ತದೆ ಎಂದು ಅಸಾದುದ್ದೀನ್ ಓವೈಸಿಯ ಗುರಿಯಾಗಿಸಿ ಅಮಿತ್ ಶಾ ಹೇಳಿದ್ದಾರೆ.
ತೆಲಂಗಾಣದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಇಲ್ಲಿ ಯಶಸ್ಸಿನ ಬಗ್ಗೆ ಆಶಾವಾದಿಯಾಗಿದೆ. ಇತ್ತೀಚೆಗಷ್ಟೇ ಇಲ್ಲಿ ಕೇಸರಿ ಪಕ್ಷದ ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಯೂ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯಲ್ಲಿ ಮಾತನಾಡಿದ್ದರು.
ಇನ್ನು ಅಮಿತ್ ಶಾ, ‘ರಾಜ್ಯದ ಜನರು ಹೈದರಾಬಾದ್ ವಿಮೋಚನಾ ದಿನವನ್ನು ಅಧಿಕೃತವಾಗಿ ಆಚರಿಸಲು ಬಯಸಿದ್ದರು. ವಿವಿಧ ರಾಜಕೀಯ ಪಕ್ಷಗಳ ನಾಯಕರು ಕೂಡ ಈ ಬಗ್ಗೆ ಭರವಸೆ ನೀಡಿದ್ದರು, ಆದರೆ ಅಧಿಕಾರಕ್ಕೆ ಬಂದ ನಂತರ ವೋಟ್ ಬ್ಯಾಂಕ್ ರಾಜಕಾರಣದ ಕಾರಣದಿಂದ ಆಚರಿಸಲು ನಿರಾಕರಿಸಿದರು. ಎಂದು ಹೇಳಿದರು.
ಹೈದರಾಬಾದ್ನ ಪರೇಡ್ ಗ್ರೌಂಡ್ನಲ್ಲಿ ನಡೆದ ‘ತೆಲಂಗಾಣ ವಿಮೋಚನಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರೊಂದಿಗೆ ಭಾಗವಹಿಸಿದ್ದರು.