jym ravi
ಮಿಸ್ಟರ್ ಇಂಡಿಯಾ, ಅಂತರಾಷ್ಟ್ರೀಯ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ಪುರಸ್ಕೃತ ಬಾಡಿಬಿಲ್ಡರ್ ಜಿಮ್ ರವಿ ಅವರಿಗೆ ಈ ಸಾಲಿನ ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ಜಿಮ್ ಮಾಲಿಕರ ಸಂಘದ ಅಧ್ಯಕ್ಷರಾಗಿರು ಆಗಿರುವ ಜಿಮ್ ರವಿ ಅವರಿಗೆ ನ್ಯಾಷನಲ್ ಕ್ರಿಸ್ ಕೌನ್ಸಿಲ್ಆಫ್ ಇಂಡಿಯಾ ಮತ್ತು ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಜಂಟಿಯಾಗಿ ಈ ಪ್ರಶಸ್ತಿ ಪ್ರದಾನಿಸಿದೆ.
ಬೆಂಗಳೂರಿನ ಚಾಮರಾಜಪೇಟೆ ಯಲ್ಲಿನ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಮ್ ರವಿ ಸಕಲ ಕಲಾ ವಲ್ಲಭರು. ಅನೇಕ ಕ್ಷೇತ್ರಗಳಲ್ಲಿ ಪರಿಣಿತರು. ಕ್ರೀಡಾಪಟು, ಬಾಡಿಬಿಲ್ಡರ್ ಮತ್ತು ನಟ ಕೂಡ ಹೌದು.
ಹೂಗಿಡದ ಉಡುಗೆಯಲ್ಲಿ ಅದಾ : ಅದಾ ಲುಕ್ ಗೆ ಅಭಿಮಾನಿಗಳು ಫಿದಾ..!
ಅಲ್ಲದೇ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಯಾಗಿದ್ದರು. ಮೂಲತಃ ಕೋಲಾರದವರಾದ ಜಿಮ್ ರವಿ ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು. ಪ್ರೋಟೀನ್ ಇಂಜೆಕ್ಷನ್ ಗಳನ್ನು ಪಡೆಯದೆ, ಮನೆ ಊಟ ಮಾಡಿ ನ್ಯಾಚುರಲ್ ಆಗಿ ಬಾಡಿ ಬಿಲ್ಡ್ ಮಾಡಿ ಖ್ಯಾತಿ ಗಳಿಸಿದ್ದಾರೆ.
‘ಭಾರತ ಶ್ರೀ’, ‘ಭಾರತ ಶ್ರೇಷ್ಠ’, ‘ಕರ್ನಾಟಕ ಶ್ರೀ’, ‘ಕರ್ನಾಟಕ ಶ್ರೇಷ್ಠ’ ಸೇರಿದಂತೆ ಹತ್ತು ಹಲವು ಪ್ರಶಸ್ತಿಗನ್ನ ತಮ್ಮದಾಗಿಸಿಕೊಂಡಿದ್ದಾರೆ.
90ಕ್ಕೂ ಹೆಚ್ಚು ಚಿನ್ನದ ಪದಕಗಳನ್ನ ಗೆದದಿರುವ ಹೆಗ್ಗಳಿಕೆಯೂ ರವಿ ಅವರದ್ದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
jym ravi








