ಇಂದಿರಾಗಾಂಧಿ ಏರ್ ಪೋರ್ಟ್ ಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ ಕೇಂದ್ರ ಸಚಿವ…
ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ತಪಸಣೆ ನಡೆಸಿದ್ದಾರೆ. ಜನದಟ್ಟಣೆ ಮತ್ತು ಇತರ ದೂರುಗಳ ಕುರಿತಂತೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಪ್ರಮುಖ ನಿರ್ದೇಶನ ನೀಡಿದ್ದಾರೆ.
“ವಾರಾಂತ್ಯದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಹೆಚ್ಚಾಗಿ ದೂರುಗಳು ದಾಖಲಾಹಗುತ್ತಿದ್ದವು , ಪ್ರವೇಶ ದ್ವಾರಗಳ ಸಂಖ್ಯೆಯನ್ನು 14 ರಿಂದ 16 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳ ಸಭೆಯ ನಂತರ ಪ್ರವೇಶಕ್ಕೂ ಮೊದಲು ಕಾಯುವ ಸಮಯವನ್ನ ಪ್ರದರ್ಶಿಸಲು ಬೋರ್ಡ್ ಹಾಕಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಸಿಂಧಿಯಾ ತಿಳಿಸಿದ್ದಾರೆ.
“ಇಂದು ನಾವು ಪ್ರವೇಶ ದ್ವಾರಗಳ ಸಂಖ್ಯೆಯನ್ನು 14 ರಿಂದ 16 ಕ್ಕೆ ಹೆಚ್ಚಿಸಿದ್ದೇವೆ. ವಿಮಾನ ನಿಲ್ದಾಣದ ಒಳಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು, ಅಲ್ಲಿ ನಾವು ಪ್ರವೇಶಕ್ಕೂ ಮೊದಲು ಕಾಯುವ ಸಮಯವನ್ನು ಪ್ರದರ್ಶಿಸಲು ಪ್ರತಿ ಪ್ರವೇಶ ಗೇಟ್‌ನಲ್ಲಿ ಬೋರ್ಡ್ ಹಾಕಬೇಕು ಎಂದು ನಿರ್ಧರಿಸಿದ್ದೇವೆ” ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.
ಸಾಂಕ್ರಾಮಿಕ ರೋಗದ ನಂತರ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಹೊಸ ಸೇವಾ ವಿತರಣಾ ವ್ಯವಸ್ಥೆಯನ್ನು ಪ್ರಾರಂಭಿಸಬೇಕಾಗಿದೆ, ”ಎಂದು ಸೇರಿಸಿದರು.
Jyotiraditya Scindia: The Union Minister made a surprise visit to Indira Gandhi Airport and inspected…








