ಮಂಡ್ಯ : ಉದಯಪುರದಲ್ಲಿ ಟೈಲರ್ ಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಗೋಪಾಲಯ್ಯ ಅವರು ಮಂಡ್ಯದಲ್ಲಿ ಆಕ್ರೋಶ ಹೊರಹಾಕಿದ್ದಾರೆ.. ಇದು ಗಂಭೀರವಾದ ಹಾಗೂ ಆಘಾತಘಾರಿ ವಿಚಾರ. ಇದು ಗಂಭೀರವಾದ ವಿಚಾರ, ಸರ್ಕಾರ ಯೋಚನೆ ಮಾಡಿ ಕ್ರಮ ವಹಿಸುತ್ತದೆ.
ಆಘಾತಕಾರಿ ವಿಚಾರವಾಗಿದ್ದು, ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೆ. ಇದು ದೇಶದ ದುರ್ಘಟನೆಯಾಗಿದೆ. ಬಿಜೆಪಿ ಸರ್ಕಾರ ಇದೆ ಇದರ ಬಗ್ಗೆ ಶೀಘ್ರವಾಗಿ ಕ್ರಮ ವಹಿಸುತ್ತದೆ ಎಂದಿದ್ದಾರೆ..
ಇನ್ನೂ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿ , ಅದರ ಬಗ್ಗೆ ನನಗೆ ಗೊತ್ತಿಲ್ಲ, ಪಕ್ಷದ ವರಿಷ್ಠರು ಇದ್ದಾರೆ. ಬಿಜೆಪಿ ಪಕ್ಷ ವಿಶ್ವದಲ್ಲಿ ದೊಡ್ಡ ಪಕ್ಷ. ಗೌರವನ್ವಿತ ಸಂಸದೆ ಯಾವಾಗ ನಿರ್ಧಾರ ತೆಗೆದುಕೊಳ್ತಾರೆ ನೋಡಬೇಕು.
ನಮ್ಮ ಬಿಜೆಪಿ ಪಕ್ಷಕ್ಕೆ ಮಂಡ್ಯ ಜಿಲ್ಲೆಯಲ್ಲಿ ಯಾರೇ ಬಂದ್ರು ಸ್ವಾಗತ. ಸಂಪೂರ್ಣವಾಗಿ ನಿರ್ಧಾರ ತೆಗೆದುಕೊಳ್ಳಬೇಕಾದ್ರೆ ಬಿಜೆಪಿ ಪಕ್ಷದ ತೀರ್ಮಾನ. ಮಂಡ್ಯ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ಮುಂದಾಗಿದೆ. ಸಭೆಯಲ್ಲಿ ಚರ್ಚಿಸಿ ಅಭಿವೃದ್ಧಿ ಕೆಲಸ ಮಾಡುವ ಕೆಲಸವಾಗುತ್ತೆ ಎಂದರು..








