IPL ನ Richest player ಆಗ್ತಾರಾ ಕೆ.ಎಲ್.ರಾಹುಲ್..? K L Rahul saaksha tv
2022ರ ಐಪಿಎಲ್ ನ ಮೆಗಾ ಹರಾಜು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಎರಡು ತಂಡಗಳು ಐಪಿಎಲ್ ಸೇರಿಕೊಂಡಿರುವುದರಿಂದ ಮೆಗಾ ಹರಾಜು ಸಾಕಷ್ಟು ರಸವತ್ತಾಗಿರಲಿದೆ. ಇದರ ಮಧ್ಯೆ ಯಾವ ಆಟಗಾರ ಯಾವ ತಂಡದ ಪಾಲಾಗುತ್ತಾರೆ..? ಈ ಬಾರಿಯ ದುಬಾರಿ ಆಟಗಾರ ಯಾರಾಗುತ್ತಾರೆ ಅನ್ನೋ ಕುತೂಹಲ ಕೂಡ ಎಲ್ಲರಲ್ಲೂ ಮೂಡಿದೆ.
ಈ ಮಧ್ಯೆ ಟೀಂ ಇಂಡಿಯಾದ ರಾಕಿಂಗ್ ಸ್ಟಾರ್ ಕೆ.ಎಲ್.ರಾಹುಲ್ ಬಗ್ಗೆ ಆಸಕ್ತಿಕರ ಸುದ್ದಿವೊಂದು ಹೊರಬಿದ್ದಿದೆ.
ಮುಂದಿನ ವರ್ಷದ ಐಪಿಎಲ್ ಸೀಸನ್‍ಗೆ ರಾಹುಲ್ ಅವರನ್ನು ಲಕ್ನೋ ಫ್ರಾಂಚೈಸಿ ನಾಯಕರನ್ನಾಗಿ ನೇಮಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ.
ಇದಕ್ಕಾಗಿ ಲಖನೌ ಫ್ರಾಂಚೈಸಿ ರಾಹುಲ್ ಗೆ ಬರೋಬ್ಬರಿ 20 ಕೋಟಿಗೂ ಅಧಿಕ ಹಣ ನೀಡಲಿದೆಯಂತೆ.
ಐಪಿಎಲ್ ಇತಿಹಾಸದಲ್ಲಿ ಯಾವೊಬ್ಬ ಆಟಗಾರನೂ ಒಂದು ತಂಡದ ನಾಯಕನಾಗಿ ಇಷ್ಟೊಂದು ದೊಡ್ಡ ಮೊತ್ತವನ್ನು ಸ್ವೀಕರಿಸಿಲ್ಲ.
ಒಂದು ವೇಳೆ ಲಖನೌ ರಾಹುಲ್ ಗೆ 20 ಕೋಟಿ ಆಫರ್ ನೀಡಿದ್ದೇ ಆದ್ದಲ್ಲಿ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಕೆ.ಎಸ್.ರಾಹುಲ್.
ಸದ್ಯ ಕೆಎಲ್ ರಾಹುಲ್ ಪ್ರತಿನಿಧಿಸುತ್ತಿರುವ ಕಿಂಗ್ಸ್ ಪಂಜಾಬ್ ಅವರನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದೆ.
ಆದ್ರೆ ಪಂಜಾಬ್ ತಂಡ ರಾಹುಲ್ ಅವರನ್ನು ಉಳಿಸಿಕೊಳ್ಳಬೇಕಾದರೇ, ಬಿಸಿಸಿಐ ನಿಯಮಗಳ ಪ್ರಕಾರ 16 ಕೋಟಿ ರೂ. ನೀಡಬೇಕಾಗುತ್ತದೆ.
ಹೀಗಾಗಿ ಪಂಜಾಬ್ ತಂಡ ರಾಹುಲ್ ಅವರನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಹೇಳಲಾಗುತ್ತಿದೆ.
ಅನಧಿಕೃತ ಅಂಕಿಅಂಶಗಳ ಪ್ರಕಾರ, ಐಪಿಎಲ್ 2021 ರ ಸೀಸನ್ ನಂತರ ನಾಯಕತ್ವದಿಂದ ಕೆಳಗಿಳಿದ ಕೊಹ್ಲಿಗೆ 2018-21ರ ಸೀಸನ್‍ಗೆ 17 ಕೋಟಿ ರೂ. ನೀಡಲಾಗಿತ್ತಂತೆ.
ಇದರ ಪ್ರಕಾರ ವಿರಾಟ್ ಕೊಹ್ಲಿ ಐಪಿಎಲ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಿದ್ದರು.









