K L Rahul
ಟೀಂ ಇಂಡಿಯಾದ ಹ್ಯಾಂಡ್ಸಮ್ ಕ್ರಿಕೆಟರ್ ಎಂದೇ ಕರೆಸಿಕೊಳ್ಳುತ್ತಿರುವ ನಮ್ಮ ಕರ್ನಾಟಕದ ಕೆ ಎಲ್ ರಾಹುಲ್ ಬ್ಯಾಟ್ ಬೀಸಿ ಅಭಿಮಾನಿಗಳನ್ನ ರಂಜಿಸೋದು ಒಂದೆಡೆ. ಆದ್ರೆ ಮತ್ತೊಂದೆಡೆ ಯುವತಿಯರ ನಡುವೆ ರಾಹುಲ್ ತಮ್ಮ ಲುಕ್ಸ್ ನಿಂದಲೇ ಫೇಮಸ್. ಅಂದ್ಹಾಗೆ ರಾಹುಲ್ ಇಂದು ತಮ್ಮ ಪ್ರೇಯಸಿಯ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬರ್ತ್ ಡೇಗೆ ವಿಶ್ ಮಾಡಿದ್ದಾರೆ.
‘ದುಬಾರಿ’ ಯಾಗಿ ಬರುತ್ತಿರುವ ಆಕ್ಷನ್ ಪ್ರಿನ್ಸ್ : ‘IM Very Costly” ಎಂದ ಧ್ರುವ..!
ರಾಹುಲ್ ಹಾಗೂ ಬಾಲಿವುಡ್ ನ ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ಪ್ರೇಮಿಸುತ್ತಿದ್ದಾರೆ ಎಂಬ ಸುದ್ದಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದಕ್ಕೆ ಪೂರಕವೆಂಬಂತೆ ಈ ಇಬ್ಬರೂ ಸಹ ಅನೇಕ ಬಾರಿ ಒಟ್ಟಿಗೆ ಕ್ಯಾಮಾರಾ ಕಣ್ಣಿಗೆ ಸೆರೆಯಾಗಿದ್ದಾರೆ.
ಅಂದ್ಹಾಗೆ ಮೂಲತಃ ಕರ್ನಾಟಕದವರೇ ಆದ ಸುನಿಲ್ ಶೆಟ್ಟಿ ಪುತ್ರಿ ಆತಿಯಾ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಆತಿಯಾ ಫೋಟೋ ಶೇರ್ ಮಾಡಿ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ ನಮ್ಮ ಕನ್ನಡಿಗ ಕೆ ಎಲ್ ರಾಹುಲ್. ಆತಿಯಾ ಅವವರೊಂದಿಗಿನ ಚಿತ್ರ ಹಂಚಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ಹಾಗೂ ಶಾಕ್ ಕೊಟ್ಟಿದ್ದಾರೆ ರಾಹುಲ್.

ಕೆ.ಎಲ್.ರಾಹುಲ್ ಇನ್ಸ್ಟಾಗ್ರಾಂ ನಲ್ಲಿ ಆತಿಯಾ ಜೊತೆಗಿನ ಫೋಟೋ ಹಂಚಿಕೊಂಡಿದ್ದು, ‘ಹುಚ್ಚು ಹುಡುಗಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಆತಿಯಾ ಸಹ ಕೆ.ಎಲ್.ರಾಹುಲ್ ಅವರ ಬರ್ತ್ ಡೇ ವೇಳೆ ರಾಹುಲ್ ಅವರ ಫೋಟೋ ಶೇರ್ ಮಾಡಿಕೊಂಡು ವಿಶ್ ಮಾಡಿದ್ರು. ಅಲ್ಲದೇ ಅವರ ಟ್ಯಾಗ್ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

‘ನನ್ನವನಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಅವರು ಕೊಟ್ಟಿದ್ದ ಕ್ಯಾಪ್ಷನ್ ಅವರು ಪ್ರೇಮಿಗಳು ಎಂಬ ಊಹಾಪೋಹ ಗಾಸಿಪ್ ಗಳಿಗೆ ರೆಕ್ಕೆ ಪುಕ್ಕ ನೀಡಿತ್ತು. ಅಷ್ಟೇ ಅಲ್ಲದ ಈ ಜೋಡಿಯ ಸಂಬಂಧದ ಬಗ್ಗೆ ಖುದ್ದು ಸುನಿಲ್ ಶೆಟ್ಟಿ ಅವರೇ ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
K L Rahul
‘777 ಚಾರ್ಲಿ’ ಗೆ ತಮಿಳು ‘ಸಿಂಹ’ನ ಎಂಟ್ರಿ: ರಕ್ಷಿತ್ ಹೇಳಿದ್ದೇನು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








