K l Rahul : ವಿಕೆಟ್ ಕೀಪರ್ರಾಗಿ ಸವಾಲುಗಳನ್ನು ಎದುರಿಸಲು ಸಿದ್ಧ ಎಂದ ರಾಹುಲ್
ಕನ್ನಡಿಗ ಕೆ.ಎಲ್.ರಾಹುಲ್ ಇನ್ನು ಮುಂದೆ ಏಕದಿನ ಕ್ರಿಕೆಟ್ನಲ್ಲಿ ವಿಶೇಷ ಪರಿಣಿತ ವಿಕೆಟ್ ಕೀಪರ್ರಾಗಿ ಮುಂದುವರೆಯಲಿದ್ದಾರೆ.
ಹಲವಾರು ವರ್ಷಗಳಿಂದ ಕೆ.ಎಲ್. ರಾಹುಲ್ ವಿಕೆಟ್ ಕೀಪರ್ರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಇದೀಗ 30 ವರ್ಷದ ಕೆ.ಎಲ್.ರಾಹುಲ್ ತವರಿನಲ್ಲಿ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟ್ ಮತ್ತು ಗ್ಲೌಸ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಎರಡನೆ ಏಕದಿನ ಪಂದ್ಯದಲ್ಲಿ ಭಾರತ 86ಕ್ಕೆ 4 ವಿಕೆಟ್ ಕಳೆದುಕೊಂಡಿದ್ದಾಗ ಕೆ.ಎಲ್.ರಾಹುಲ್ ಹಾರ್ದಿಕ್ ಜೊತೆಗೂಡಿ ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ತಮ್ಮ ವಿಕೆಟ್ ಕೀಪಿಂಗ್ ಕುರಿತು, ವಿಕೆಟ್ ಕೀಪಿಂಗ್ 2019, 2020, 21ರಲ್ಲಿ ಮಾಡಿದ್ದೀನಿ, ನಾಯಕ ಮತ್ತು ತಂಡದ ಬೆಂಬಲ ಇದ್ದಾಗ ಇದಕ್ಕೆ ಒಗ್ಗಿಕೊಳ್ಳಲು ಪ್ರಯತ್ನಿಸಿದ್ದೀನಿ.
ಸವಾಲುಗಳನ್ನು ಎದುರಿಸಿಲು ಇದು ಸಹಾಯ ಮಾಡಿದೆ. ನನಗೆ ವಿಶೇಷ ತರಬೇತಿ ಬೇಕಿದೆ ಎಂದು ಕೆ.ಎಲ್.ರಾಹುಲ್ ಹೇಳಿದ್ದಾರೆ.
ನಾನು ವಿಶ್ವಕಪ್ನಲ್ಲಿ 6ನೇ ಕ್ರಮಾಂಕದಲ್ಲಿ ಆಡಿದ್ದೇನೆ. 4 ಮತ್ತು 5ನೇ ಕ್ರಮಾಂಕದಲ್ಲಿ ಆಡಿ ಸವಾಲುಗಳನ್ನು ತುಂಬ ಎಂಜಾಯ್ ಮಾಡಿರುವುದಾಗಿ ರಾಹುಲ್ ಹೇಳಿದ್ದಾರೆ.








