ನಮ್ಮ ಪಕ್ಷದಲ್ಲಿ ಅಪ್ಪ ಅಮ್ಮ ಇದ್ದಾರೆ, ಕಾಂಗ್ರೆಸ್ ನಲ್ಲಿಲ್ಲ : ಈಶ್ವರಪ್ಪ
ಮೈಸೂರು : ನಮ್ಮ ಪಕ್ಷದಲ್ಲಿ ಅಪ್ಪ ಅಮ್ಮ ಇದ್ದಾರೆ, ಆದರೆ ಕಾಂಗ್ರೆಸ್ ನಲ್ಲಿ ಈ ರೀತಿ ಇಲ್ಲ. ನಮ್ಮಲ್ಲಿ ಸಿಎಂ ಬಗ್ಗೆ ಮೂರ್ನಾಲ್ಕು ಜನರಷ್ಟೆ ಮಾತನಾಡುತ್ತಿದ್ದಾರೆ. ಅದನ್ನು ಬಿಟ್ಟು ಬೇರೆ ಯಾರು ಮಾತನಾಡುತ್ತಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ನಮ್ಮಲ್ಲಿ ಸಿಎಂ ಬಗ್ಗೆ ಮೂರ್ನಾಲ್ಕು ಜನ ಮಾತನಾಡುತ್ತಾರೆ. ಮೂರು ಜನಕ್ಕೆ ಹೇಗೆ, ಯಾವಾಗ ಬುದ್ದಿಕಲಿಸಬೇಕು ಎಂಬುದು ಗೊತ್ತಿದೆ ಬುದ್ದಿ ಕಲಿಸುತ್ತೇವೆ. ನಮ್ಮ ಪಕ್ಷದಲ್ಲಿ ಅಪ್ಪ ಅಮ್ಮ ಇದ್ದಾರೆ, ಆದರೆ ಕಾಂಗ್ರೆಸ್ ನಲ್ಲಿ ಈ ರೀತಿ ಇಲ್ಲ. ವಿಶ್ವನಾಥ್ ಮಾತನಾಡುತ್ತಿರುವುದು ಸಿದ್ದರಾಮಯ್ಯ ಚಾಹೆಯಿಂದ, ಸ್ವಪಕ್ಷಕ್ಕೆ ಸಿದ್ದರಾಮಯ್ಯ ರೆ ವಿಲನ್. ಪಕ್ಷದೊಳಗೆ ಇದ್ದುಕೊಂಡು ಸಿದ್ದರಾಮಯ್ಯ ಆಟಾ ಆಡುತ್ತಿದ್ದಾರೆ. ಇದೆ ಛಾಯೆ ವಿಶ್ವನಾಥ್ ರಲ್ಲೂ ಉಳಿದುಕೊಂಡಿದೆ. ಬಿಜೆಪಿಯನ್ನ ಶಿಸ್ತಿನ ಪಕ್ಷ ಅಂತಲೇ ವಿಶ್ವನಾಥ್ ಮಾತನಾಡುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಇನ್ನು ಸಿದ್ದರಾಮಯ್ಯ, ಪರಮೇಶ್ವರ ಇಬ್ಬರೂ ಯಾವುದಾದರೂ ದಲಿತರ ಬೀದಿಗೆ ಹೋಗಲಿ. ಸಿದ್ದರಾಮಯ್ಯ ಅವ್ರನ್ನ ಸೋಲಿಸಲು ನಾನು ಪ್ರಯತ್ನ ಮಾಡಿಲ್ಲ ಅಂತಾ ಪರಮೇಶ್ವರ್ ಹೇಳಲಿ. ಪರಮೇಶ್ವರ ಸೋಲಿಸಲು ನಾನು ಪ್ರಯತ್ನ ಮಾಡಿಲ್ಲ ಅಂತಾ ಸಿದ್ದರಾಮಯ್ಯ ಆಣೆ ಮಾಡಿ ಹೇಳಲಿ. ಹೀಗೆ ಮಾಡಿಕೊಂಡೆ ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೊಸೆ ಅಂತಾರೇ. ಬಾದಾಮಿಯಲ್ಲಿ ನಿಂತು ಅಲ್ಲಿಯೂ ಸೊಸೆ ಅಂತಾರೇ. ಕೀಲಿ ಕೈ ನನ್ನ ಕೈಯಲ್ಲಿ ಇದೆ ಅಂತಾರೇ. ಹಾಗಿದ್ರೆ ನೀವು ಯಾವ ಪಕ್ಷಕ್ಕೆ ಮಗ ಹೇಳಿ ಎಂದು ಈಶ್ವರಪ್ಪ ಕುಟುಕಿದರು.








