K.S.Eshwarappa | ಮುಸ್ಲಿಂ ಗೂಂಡಾಗಳು ಹಿಂದೂಗಳ ಶಾಂತಿಯ ಪರೀಕ್ಷೆ ಮಾಡುವುದು ಬೇಡ
ಶಿವಮೊಗ್ಗ : ಮುಸ್ಲಿಂ ಗೂಂಡಾಗಳು ಹಿಂದೂಗಳ ಶಾಂತಿಯ ಪರೀಕ್ಷೆ ಮಾಡುವುದು ಬೇಡ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಖಂಡಿಸಿದ್ದು, ಸರ್ಕಾರದ, ಹಿಂದುಗಳ ದೌರ್ಬಲ್ಯ ಅಲ್ಲ ಹಿಂದೂಗಳು ಶಾಂತಿ ಕಾಪಾಡುತ್ತಿದ್ದಾರೆ. ಮುಸ್ಲಿಂ ಗೂಂಡಾಗಳು ಹಿಂದೂಗಳ ಶಾಂತಿಯ ಪರೀಕ್ಷೆ ಮಾಡುವುದು ಬೇಡ. ಹಿಂದೂಗಳು ಇದನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
ನಾಳೆ ಸಿಎಂ ಭೇಟಿ ಮಾಡಿ ಚರ್ಚಿಸುತ್ತೇನೆ. ಇದನ್ನು ಮಟ್ಟಹಾಕಲು ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬಹುದೆಂದು ಚರ್ಚೆ ಮಾಡ್ತೇನೆ. ಕೊಲೆಗೆ ಪ್ರತಿಕಾರ ಕೊಲೆಯೆಂದು ಹಿಂದುತ್ವ ನಂಬಿಲ್ಲ. ಮುಸ್ಲಿಂ ಗೂಂಡಾಗಳು ಮನಸ್ಥಿತಿ ಬದಲಾಯಿಸದಿದ್ದರೆ ಕಷ್ಟಕರವಾಗಲಿದೆ. ಮನಸ್ಥಿತಿ ಬದಲಾವಣೆಗೆ ಏನು ಮಾಡಬೇಕೆಂದು ಸರ್ಕಾರ ನಿರ್ಧರಿಸಲಿ, ಕೊಲೆ ಮಾಡುವ ಧೈರ್ಯವೇ ಬರಬಾರದು, ಅಂತಹ ಕಠಿಣ ಕಾನೂನು ಬರಬೇಕು. ಹಿಂದೂಗಳ ಶಾಂತಿ ಮಂತ್ರ ದುರುಪಯೋಗ ಬೇಡ, ಇಂತಹ ಕೃತ್ಯಕ್ಕೆ ಬೆಂಬಲಿಸುವ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.

ಇದೇ ವೇಳೆ ಚಿಕ್ಕಮಗಳೂರಲ್ಲಿ ಬಿಜೆಪಿ ಮುಖಂಡರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ರಾಜೀನಾಮೆ ಇದಕ್ಕೆ ಪರಿಹಾರವಲ್ಲ. ನಾಳೆ ಬೊಮ್ಮಾಯಿ ನೇತೃತ್ವದ ಸರ್ಕಾರದ ಒಂದು ವರ್ಷದ ಸಾಧನೆಯ ಸಮಾವೇಶ ನಡೆಯಲಿದೆ. ಇ.ಡಿ. ಪ್ರಕರಣ ನೆಪವಿಟ್ಟುಕೊಂಡು ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಮನೆಯಲ್ಲಿ ದಾಳಿ ನಡೆದಾಗ ಕೋಟಿಗಟ್ಟಲೆ ಹಣ ಸಿಕ್ಕಿತ್ತು. ಡಿಕೆಶಿ ತಿಹಾರ್ ಜೈಲಿಗೂ ಹೋಗಿ ಬಂದರು, ಡೆಕ್ಕನ್ ಹೆರಾಲ್ಡ್ನಲ್ಲಿ ಭ್ರಷ್ಟಾಚಾರ ನಡೆದಿರುವುದು ಜಗಜ್ಜಾಹೀರಾಗಿದೆ. ಕೆಂಪಯ್ಯ ಅವರನ್ನು ಇಟ್ಟುಕೊಂಡು ಆಟ ಆಡ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿಕೆಶಿ ಭ್ರಷ್ಟರು, ಕಾಂಗ್ರೆಸ್ ಮುಖಂಡರ ಭ್ರಷ್ಟೋತ್ಸವ ವಿರುದ್ಧ ನಾವು ದೊಡ್ಡಬಳ್ಳಾಪುರ ದಲ್ಲಿ ನಾಳೆ ಜನೋತ್ಸವ ಮಾಡ್ತೇವೆ ಎಂದು ಹೇಳಿದ್ದಾರೆ.








