K.S.Eshwarappa | ರಾಷ್ಟ್ರವಾದಿ ಮುಸಲ್ಮಾನರು ಬಿಜೆಪಿಗೆ ಬಂದ್ರೆ ಸ್ವಾಗತ
ಬಾಗಲಕೋಟೆ : ರಾಷ್ಟ್ರವಾದಿ ಮುಸಲ್ಮಾನರು ಬಿಜೆಪಿಗೆ ಬಂದ್ರೆ ಸ್ವಾಗತ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಬಿಡುವ ಬಗ್ಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಮುಸಲ್ಮಾನರು ಕಾಂಗ್ರೆಸ್ ಬಿಟ್ಟರೆ ಕಾಂಗ್ರೆಸ್ ಉಸಿರು ಗಟ್ಟಿ ಸತ್ತು ಹೋಗುತ್ತೆ. ಕಾಂಗ್ರೆಸ್ ಕೇವಲ ಓಟಿಗಾಗಿ ಮುಸಲ್ಮಾನರನ್ನ ಬಳಕೆಮಾಡಿಕೊಂಡಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಅಮೃತ ಮಹೋತ್ಸವದ ಸಂದರ್ಭದಲ್ಲಿ ಮುಸಲ್ಮಾನರಿಗೆ ಅರ್ಥವಾಗುತ್ತಿದೆ. ಬಿಜೆಪಿ ಜೊತೆಗೆ ಹಿಂದುಳಿದವರು,ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಈಗ ಮುಸಲ್ಮಾನರು ಕೂಡ ಬಿಜೆಪಿಗೆ ಬರೋದಕ್ಕೆ ಸ್ವಲ್ಪ ಹಿಂದೆ ಮುಂದೆ ನೋಡ್ತಾ ಇದ್ದಾರೆ. ಕೇಂದ್ರ ಮಂತ್ರಿಮಂಡಲದವಿಸ್ತರಣೆ ಸಂದರ್ಭದಲ್ಲಿ ದಲಿರು ಹಿಂದುಳಿದವರಿಗೆ ಪ್ರಧಾನಿ ಮೋದಿ ಹೆಚ್ಚಿನ ಅವಕಾಶ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಮುಸಲ್ಮಾನರ ನಾಯಕ ಸಿಎಂ ಇಬ್ರಾಹಿಂ ಯಾಕ ಪಕ್ಷ ಬಿಡ್ತಾ ಇದ್ದಾರೆ. ಈಗ ಜಮೀರ ಅಹಮ್ಮದ ಎಲ್ಲಾದ್ರು ಕಾಂಗ್ರೆಸ್ಸಿನಲ್ಕಿ ಕಾಣಿಸಿಕೊಳ್ತಾರಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಸಿದ್ದರಾಮಯ್ಯ ಹಿಂದೆನೂ ಕಾಣಿಸೊಲ್ಲ…ಡಿಕೆ ಶಿವಕುಮಾರ ಹಿಂದೇನೂ ಕಾಣಿಸೊಲ್ಲ. ರಾಷ್ಟ್ರವಾದಿ ಮುಸಲ್ಮಾನರು ಬಿಜೆಪಿಗೆ ಬಂದ್ರೆ ಸ್ವಾಗತ. ಆದ್ರೆ ಯವುದೇ ಕಾರಣಕ್ಕೂ ಸಿಎಂ ಇಬ್ರಾಹಿಂ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.









