Politics : ಕನಕಪುರ ಬಂಡೆ ಕದ್ದು ಬೇರೆ ರಾಜ್ಯಕ್ಕೆ ಕಳಿಸಿದ್ದು ಡಿಕೆ ಬ್ರದರ್ಸ್ – ಈಶ್ವರಪ್ಪ
ಚಿತ್ರದುರ್ಗ : ಸಚಿವರ ಪುತ್ರ ಕೇಸರಿ ಶಾಲು ವಿತಹರಿಸಿದ್ದಾರೆಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.. ಚಿತ್ರದುರ್ಗದಲ್ಲಿ ಮಾತನಾಡಿರುವ ಅವರು 50 ಲಕ್ಷ ಕೇಸರಿ ಶಾಲು ಸೂರತ್ ನಿಂದ ಬಂದಿವೆ ಎಂದು ಡಿಕೆಶಿ ಹೇಳಿದ್ದಾರೆ. ಅಯೋಧ್ಯೆಯ ಶ್ರೀರಾಮನ ಪ್ಯಾಕ್ಟರಿಗೆ ನಾವು ಆರ್ಡರ್ ನೀಡಿದ್ದು.
ಅಯೋಧ್ಯೆಯಿಂದ ಹನುಮನ ಟ್ರಾನ್ಸಪೋರ್ಟ್ ನಲ್ಲಿ ರಾಜ್ಯಕ್ಕೆ ಶಾಲು ಬಂದಿವೆ. ರಾಜ್ಯದ ಕೋಟಿ ಕೋಟಿ ಯುವಕರ ಹೃದಯದಲ್ಲಿ ಕೇಸರಿ ತಲುಪಿದೆ. ಇದು ಎಲ್ಲಿಂದ ಬಂತು ಎಂದು ಡಿಕೆ ಶಿವಕುಮಾರ್ ಗೆ ಗೊತ್ತಿಲ್ಲ.
ಕನಕಪುರ ಬಂಡೆ ಪ್ಯಾಕ್ಟರಿ ಮೂಲಕ ಬಂಡೆ ಕದ್ದು ಬೇರೆ ರಾಜ್ಯಕ್ಕೆ ಕಳಿಸಿದ್ದು ಡಿಕೆ ಬ್ರದರ್ಸ್. ಅಯೋಧ್ಯೆಯ ಕೇಸರಿ ಶಾಲು ದೇಶ ಭಕ್ತಿಯ ಜಾಗೃತಿ ಮೂಡಿಸಿದೆ, ಇದು ತಡೆಯಲು ಆಗುತ್ತಿಲ್ಲ. ಅದೇ ಶಾಲುಗಳು ವಿಧ್ಯಾರ್ಥಿಗಳಿಗೆ ದೇಶದ ಪ್ರತಿಯೊಬ್ಬರಿಗೂ ತಲುಪಿದೆ ಎಂದಿದ್ದಾರೆ.