Karnataka Politics : ಸಿದ್ದರಾಮಯ್ಯ ಅವರ ತಲೆಯಲ್ಲಿ ಸಗಣಿ ಇತ್ತೇನೋ ಗೊತ್ತಿಲ್ಲ – ಈಶ್ವರಪ್ಪ…
ಚಿತ್ರದುರ್ಗ : ರಾಷ್ಟ್ರ ಧ್ವಜದ ಮೇಲೆ ಗೌರವ ಇಲ್ಲದವರು ರಾಜಕೀಯದಲ್ಲಿ ಇರಬಾರದು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಚಿತ್ರದುರ್ಗದಲ್ಲಿ ಸಚಿವ KS ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಸರಿಯಾಗಿ ಹೇಳಿದ್ದಾರೆ, ಕೇಸರಿ ಪೇಟ ಹಾಕಲು ಹೋದಾಗ ತೆಗೆದು ಬಿಸಾಕಿದ್ದಾರೆ. ಆಗ ಸಿದ್ದರಾಮಯ್ಯ ಅವರ ತಲೆಯಲ್ಲಿ ಸಗಣಿ ಇತ್ತೇನೋ ಗೊತ್ತಿಲ್ಲ. ಕೇಸರಿ ತ್ಯಾಗ, ಬಲಿದಾನದ ಸಂಕೇತ, ರಾಷ್ಟ್ರ ದ್ವಜದ ಗೌರ ಇದೆ.
ನಿನ್ನೆ ಡಿಕೆಶಿ ರಾಷ್ಟ್ರದ್ವಜವನ್ನ ರಾಜಕೀಯ ದುರುಪಯೋಗ ಮಾಡಿದ್ದಾರೆ. ಶಿವಮೊಗ್ಗದಲ್ಲಿ ರಾಷ್ಟ್ರದ ಇಳಿಸಿ ಕೇಸರಿ ದ್ವಜ ಹಾರಿಸಿದ್ದಾರೆ ಎಂದು ಹೇಳಿ ಡಿಕೆಶಿ ಅಪಮಾನ ಮಾಡಿದ್ದಾರೆ.
ಮಕ್ಕಳಿಗೆ ಸಮವಸ್ತ್ರ ಬಗ್ಗೆ ಎಲ್ಲರೂ ತಿಳಿ ಹೇಳಬೇಕಿತ್ತು. ಉಡುಪಿಯಲ್ಲಿ 6 ಮಂದಿ ಮಾತ್ರ ಹಿಜಾಬ್ ಧರಿಸಿ ಹೋಗಿದ್ದಾರೆ, ಅವರಿಗೆ ಸಮಾಧಾನ ಮಾಡಬೇಕಿತ್ತು. ಕಾಂಗ್ರೆಸ್ ನಾಯಕರು, ಮುಸ್ಲಿಂ ನಾಯಕರು ಮಾಡಿದ್ದರೆ, ದೇಶದಲ್ಲಿ ಈ ಸ್ಥಿತಿ ಬರ್ತಾ ಇರ್ಲಿಲ್ಲ.
ಬೇಕು ಎಂದು ವ್ಯವಸ್ಥಿತವಾಗಿ ನಡೆಸಿರುವಂತ ಸಂಚು ಇದು, ಇದರ ವಿರುದ್ಧ ಉಗ್ರವಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಅಲ್ಲದೇ ಎಲ್ಲಾ ಮಕ್ಕಳು ಸಮವಸ್ತ್ರ ಧರಿಸಿ ಎಂದು ಈಗಲೂ ನಾನು ಹೇಳುತ್ತೇನೆ. ಕ್ರಿಶ್ಚಿಯನ್ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ. ಓಟಿನ ಮೇಲೆ ಕಣ್ಣಿಟ್ಟು ಮಾಡುತ್ತಿರುವ ಕುತಂತ್ರ ಇದು ಎಂದಿದ್ದಾರೆ.









