Kaalave mosagaara
OTT ಹೆಸರಲ್ಲಿ “ಕಾಲವೇ ಮೋಸಗಾರ”ನಿಗೆ ಮಹಾಮೋಸ..!
ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್ ಗಳಿಗಿಂತಲೂ ಒಟಿಟಿ ಫ್ಲಾಟ್ ಫಾರ್ಮ್ ಸಿನಿಮಾ ರಿಲೀಸ್ ಗೆ ಉತ್ತಮ ಎಂದು ಭಾವಿಸಲಾಗುತ್ತಿದೆ. ಅನೇಕ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿ ಸದ್ದು ಮಾಡ್ತಿವೆ. ಸಣ್ಣ ಬಜೆಟ್ ಸಿನಿಮಾವಾಗಿರಬುಹುದು , ಮಧ್ಯಮ ಬಜೆಟ್ ಸಿನಿಮಾವಾಗಿರಬಹುದು ಲಾಭ ಮಾಡಿಕೊಳ್ಳಲು ಡಿಜಿಟಲ್ ಮೀಡಿಯಾ ಒಂದೊಳ್ಳೆ ಪ್ಲಾಟ್ ಫಾರ್ಮ್ ಆಗಿದೆ. ಆದ್ರೆ ಇದೇ ಡಿಜಿಟಲ್ ಮೀಡಿಯಾ ಮೂಲಕ ಕಳ್ಳರು ದುಡ್ಡು ಮಾಡಿಕೊಳ್ಳುವ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಹೌದು ಕೆಲ ಮಧ್ಯವರ್ತಿಗಳು ಹಾಗೂ ಮೋಸಗಾರರಿಂದ ಸಿನಿಮಾ ತಂಡಗಳು ಮೋಸಹೋಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಕನ್ನಡದ ‘ಕಾಲವೇ ಮೋಸಗಾರ’ ಸಿನಿಮಾ.
ಕಾಲವೇ ಮೋಸಗಾರ ಸಿನಿಮಾವನ್ನ ಒಟಿಟಿಗೆ ಮಾರಲು ಚಿತ್ರತಂಡ ನಿರ್ಧಾರ ಮಾಡಿತ್ತು. ಮಿಸ್ಟಿಕ್ ಸ್ಟುಡಿಯೋಸ್ ನವರು ಎಂದು ಹೇಳಿಕೊಂಡಿದ್ದ ವೆಂಕಟೇಶ್ ಆಚಾರ್ಯ ಎಂಬಾತ, ಕಾಲವೇ ಮೋಸಗಾರ ಸಿನಿಮಾವನ್ನು ಒಟಿಟಿಗೆ ಐದು ಕೋಟಿಗೆ ಮಾರಿಸಿಕೊಡುವುದಾಗಿ ಹೇಳಿಕೊಂಡಿದ್ದ. ಅದರಂತೆ ಆತನನ್ನು ನಂಬಿರುವ ಸಿನಿಮಾ ತಂಡ , ಆತನ ಓಡಾಡಕ್ಕೆ ಇತರ ಖರ್ಚಿಗೆಂದು 1.30 ಲಕ್ಷ ಹಣ ನೀಡಿದ್ದಾರೆ. 45 ದಿನಗಳಲ್ಲಿ ಡೀಲ್ ಮುಗಿದು ನಿಮಗೆ ಐದು ಕೋಟಿ ಬರುತ್ತದೆ ಎಂದು ಹೇಳಿದ್ದ ವೆಂಕಟೇಶ್ ಆ ನಂತರ ನಾಪತ್ತೆಯಾಗಿದ್ದಾನೆ. ಹಣ ಕೊಟ್ಟು 150 ದಿನವಾದರೂ ಆತ ಅಡ್ರೆಸ್ ಗೆ ಸಿಕ್ಕಿಲ್ಲ. ಇತ್ತ ಸಿನಿಮಾವನ್ನೂ ಸಹ ಒಟಿಟಿ ಕೊಂಡುಕೊಂಡಿಲ್ಲ. 
ಸದ್ಯ ವೆಂಕಟೇಶ್ ನಿಂದ ಮೋಸಕ್ಕೊಳಗಾಗಿರುವ ಚಿತ್ರತಂಡ ಇದೀಗ ಫಿಲ್ಮ್ ಚೇಂಬರ್ ನ ಮೊರೆ ಹೋಗಿದೆ. ನ್ಯಾಯ ಕೊಡಿಸಿ ಎಂದು ಕೇಳೊಕೊಂಡಿದೆ ಚಿತ್ರತಂಡ. ಇತ್ತ ಪೊಲೀಸರಿಗೂ ದೂರು ಸಲ್ಲಿಸಲು ಮುಂದಾಗಿದೆ ಚಿತ್ರತಂಡ. ಕೊರೊನಾ ಕಾರಣದಿಂದ ಸಿನಿಮಾರಿಲೀಸ್ ಗೆ ಡಿಜಿಟಲ್ ಮೀಡಿಯಾ ಮೊರೆ ಹೋದ ಸಿನಿಮಾತಂಡಕ್ಕೆ ಮಹಾಮೋಸವಾಗಿದೆ. ಸಿನಿಮಾವನ್ನ ಐದು ಭಾಷೆಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಲಾಗಿತ್ತು. ಅಂದ್ಹಾಗೆ ‘ಲಾಸ್ಟ್ ಪೆಗ್’ ಹೆಸರಲ್ಲಿ ಸಿನಿಮಾವನ್ನ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿನಿತಂಡ ಸಜ್ಜಾಗಿತ್ತು. ಸಂಜಯ್ ವದತ್ ಸಾರಥ್ಯದಲ್ಲಿ ಮೂಡಿಬಂದಿದ್ದ ಚಿತ್ರಕ್ಕೆ ರಜತ್ ದರ್ಗೋಜಿ ಸಾಲಂಕಿ ಬಂಡವಾಳ ಹೂಡಿದ್ದರು. ಭರತ್ ಸಾಗರ್ ನಾಯಕನಾಗಿ ಕಾಣಿಸಿಕೊಂಡಿದ್ದರು.
ಸ್ಯಾಂಡಲ್ ವುಡ್ ನ ‘ಮೋಹಕ ತಾರೆ’ಗೆ ಬರ್ತ್ ಡೇ ಸಂಭ್ರಮ : ಶುಭಕೋರಿದ ಕಿಚ್ಚ..!
Kaalave mosagaara
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








