ಹಿಂದಿಯಲ್ಲೂ ಬರಲಿದೆ ಕಾಂತಾರ – ಅ.9 ರಂದು ಟ್ರೈಲರ್ ಬಿಡುಗಡೆ..
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರ ರಾಜ್ಯದ್ಯಾಂತ ಭರ್ಜರಿಯಾಗಿ ಓಡುತ್ತಿದೆ. ಎಲ್ಲಾ ಕಡೆಯಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬೇರೆ ರಾಜ್ಯ ದೇಶಗಳಲ್ಲೂ ಸಹ ಇದಕ್ಕೆ ಒಳ್ಳೆ ಬೇಡಿಕೆ ಇದೆ.
ಕಾಂತಾರ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಸಿನಿಮಾ ಸಕ್ಸಸ್ ಆದ ಬಳಿಕ ಬೇರೆ ಬಾಷೆಯಲ್ಲೂ ಸಹ ಬಿಡುಗಡೆ ಮಾಡುವಂತೆ ಚಿತ್ರ ತಯಾರಕರ ಮೇಲೆ ಪ್ರೇಕ್ಷಕರು ಒತ್ತಾಯಾ ಮಾಡಿದ್ದರು.
ಕೇವಲ ಸಬ್ ಟೈಟಲ್ ಮೂಲಕವೇ ಕನ್ನಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದವರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್ ಇದೀಗ ಕಾಂತಾರ ಚಿತ್ರ ಹಿಂದಿಯಲ್ಲೂ ಸಹ ತರೆಕಾಣಲಿದೆ.
ಕಾಂತಾರ ಸಿನಿಮಾ ಹಿಂದಿಗೆ ಡಬ್ ಆಗುತ್ತಿದೆ. ಈ ಸುದ್ದಿಯನ್ನ ಹೊಂಬಾಳೆ ಫಿಲಂ ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ್ ಅವರು ಅಧಿಕೃತವಾಗಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಅಕ್ಟೋಬರ್ 9 ರಂದು ಹಿಂದಿ ಅವತರಣಿಕೆಯ ಅಫಿಶಿಯಲ್ ಟ್ರೈಲರ್ ರಿಲೀಸ್ ಆಗಲಿದೆ.
Kaanthara : Kanthara will also come in Hindi – trailer release on August 9.