ಕಡಬ, ಜೂನ್ 14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಇದೀಗ ಕಡಬದಲ್ಲಿ ಸಿ.ಎ.ಬ್ಯಾಂಕ್ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕಡಬ ಪೇಟೆಯ ಪಂಜ ರಸ್ತೆಯಲ್ಲಿರುವ ಸಿ.ಎ.ಬ್ಯಾಂಕ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಸಿ.ಎ ಬ್ಯಾಂಕನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.
ಸಿ.ಎ. ಬ್ಯಾಂಕ್ ನ ಪರಿಸರದ 100 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು, ಬ್ಯಾಂಕ್ ನ ಸಮೀಪದಲ್ಲಿದ್ದ ರಿಕ್ಷಾ ನಿಲ್ದಾಣವನ್ನು ಸ್ಥಳಾಂತರಿಸಲಾಗಿದೆ.
ಸಿ.ಎ. ಬ್ಯಾಂಕ್ ನ ಪರಿಸರ ಸೀಲ್ ಡೌನ್ ಸಂದರ್ಭದಲ್ಲಿ ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್, ಪಿಡಿಒ ಚೆನ್ನಪ್ಪ ಗೌಡ, ವಿ.ಎ ಹರೀಶ್ ಕುಮಾರ್ ಸಿಬ್ಬಂದಿ ಹರೀಶ ಬೆದ್ರಾಜೆಯವರು ಸ್ಥಳದಲ್ಲಿ ಉಪಸ್ಥಿತರಿದ್ದರು.