ಲಡಾಕ್ ಗಡಿ ಪ್ರದೇಶದಲ್ಲಿ ಚೀನಾ ಹಾಗೂ ಭಾರತೀಯ ಸೇನೆಯ ನಡುವಿನ ಸಂಘರ್ಷದ ಬಳಿಕ ಡ್ರ್ಯಾಗನ್ ಅನ್ನು ಆರ್ಥಕವಾಗಿ ಕಟ್ಟಿಹಾಕಿಲು ಭಾರತ ಸರ್ಕಾರ ರಣತಂತ್ರ ರೂಪಿಸಿದೆ. ಇದರ ಭಾಗವಾಗಿಯೇ ಟಿಕ್ ಟ್ಯಾಕ್ ಆಪ್ ಸೇರಿದಂತೆ ಪ್ರಮುಖ 59 ಆ್ಯಪ್ ಗಳನ್ನ ಬ್ಯಾನ್ ಮಾಡಿ ಚೀನಾಗೆ ಭಾರತ ಬಿಗ್ ಶಾಖ್ ನೀಡಿತ್ತು. ಇದರ ಬೆನ್ನಲ್ಲೇ ಅನೇಕ ಉದ್ಯಮಿಗಳು ಚೀನಾ ಮೂಲದ ಪ್ರಾಜೆಕ್ಟ್ ಗಳಿಂದ ಹಿಂದೆ ಸರಿದು ಚೀನಾ ವಿರುದ್ಧದ ಹೋರಾಟಕ್ಕೆ ಸಾಥ್ ನಿಡಿದ್ರು. ಇದೀಗ ಈ ಸಾಲಿಗೆ ಬಾಲಿವುಡ್ ತಾರೆಯರು ಸೇರ್ಪಡೆಗೊಂಡಿದ್ದಾರೆ.
ಹೌದು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಚೀನಾ ಬ್ರ್ಯಾಂಡ್ ನೊಂದಿಗಿನ ಬಹುಕೋಟಿ ಒಪ್ಪಂದವನ್ನು ರದ್ದು ಮಾಡಿದ್ದಾರೆಂಬ ಸುದ್ದಿ ಹರಿದಾಡ್ತಿದೆ. ಮೂಲಗಳ ಪ್ರಕಾರ ಕಾರ್ತಿಕ್ ಇತ್ತೀಚೆಗಷ್ಟೇ ಒಪ್ಪೊ ಬ್ರಾಂಡ್ ಜೊತೆ ಬಹುಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದರು ಎನ್ನಲಾಗಿದೆ. ಆದರೆ ಇದೀಗ ಕಾರ್ತಿಕ್ ಆರ್ಯನ್ ಐಫೋನ್ ಹಿಡಿದಿರುವ ಫೋಟೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಕಾರ್ತಿಕ್ ಚೀನಾ ಬ್ರ್ಯಾಂಡ್ ನೊಂದಿಗಿನ ಬಹುಕೋಟಿ ಒಪ್ಪಂದ ಕೈಬಿಟ್ಟಿದ್ದಾರೆ ಎಂಬ ಚರ್ಚೆಗಳು ವ್ಯಾಪಕವಾಗಿ ಕೇಳಿ ಬರ್ತಿವೆ. ಒಂದು ವೇಳೆ ಕಾರ್ತಿಕ್ ಒಪ್ಪೊ ಕಂಪನಿಯಿಂದ ದೂರ ಸರಿದಿದ್ದು ಖಚಿತವಾದರೆ, ಚೀನಾ ಬ್ರ್ಯಾಂಡ್ ನೊಂದಿಗಿನ ಒಪ್ಪಂದ ರದ್ದು ಮಾಡಿಕೊಂಡ ದೇಶದ ಮೊದಲ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.








