Kalaburagi | ಪ್ರವಾಹಕ್ಕೆ ಸಿಲುಕಿ ಮಹಿಳೆ ನೀರುಪಾಲು
ಕಲಬುರಗಿ : ಪ್ರವಾಹಕ್ಕೆ ಸಿಲುಕಿ ಮಹಿಳೆ ನೀರುಪಾಲಾಗಿರುವ ಘಟನೆ ಕಲಬುರಗಿಯ ತೀರ್ಥ ಗ್ರಾಮದಲ್ಲಿ ನಡೆದಿದೆ.
ಶ್ರೀ ದೇವಿ ನೀರುಪಾಲಾದ ಮಹಿಳೆಯಾಗಿದ್ದಾರೆ.
ನಿನ್ನೆ ಸುರಿದ ಭಾರಿ ಮಳೆಗೆ ಕಲಬುರಗಿ ಜಿಲ್ಲೆಯಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ಶ್ರೀ ದೇವಿ ಅವರು ಜಮೀನು ಕೆಲಸಕ್ಕೆ ಹೋಗಿದ್ದರು.
ಅಲ್ಲಿಂದ ಮನೆಗೆ ವಾಪಸ್ ಆಗುವಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ.
ಈ ವಿಷಯ ತಿಳಿದ ಗ್ರಾಮಸ್ಥರು ಮಹಿಳೆ ಪತ್ತೆಗಾಗಿ ಹರಸಾಹಸ ಪಡೆಯುತ್ತಿದ್ದಾರೆ.
ಇತ್ತ ಗ್ರಾಮಸ್ಥರು ಈಗಾಗಲೇ ಆಳಂದ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.