ಮಕ್ಕಳ ಕಳ್ಳರೆಂದು ಭಾವಿಸಿ ಮಹಿಳೆಯರಿಗೆ ಥಳಿತ…
ಕಲಬುರಗಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಮಹಿಳೆಯರಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ನಡೆದಿದೆ.
ತೆಲಂಗಾಣದ ಕೊತ್ಲಾಪುರ ಗ್ರಾಮದಿಂದ ಪೋಲಕಪಳ್ಳಿ ಗ್ರಾಮಕ್ಕೆ ಮಹಿಳೆಯರಿಬ್ಬರು ಆಗಮಿಸಿದ್ದರು. ಈ ವೇಳೆ ಇವರನ್ನೇ ಕಳ್ಳಿಯರು ಎಂದು ಭಾವಿಸಿದ ಗ್ರಾಮಸ್ಥರು ಮಹಿಳೆಯರ ಮೇಲೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಚಿಂಚೋಳಿ ಪೊಲೀಸರಿಗೆ ಮಹಿಳೆಯರನ್ನು ಒಪ್ಪಿಸಿದ್ದಾರೆ.
ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ವಿಚಾರಣೆ ನಡೆಸಿದ ಪೊಲೀಸರ ಬಳಿ “ತಾವು ತೆಲಂಗಾಣದಿಂದ ಸಂಬಂಧಿಕರ ಮನೆಗೆ ಬಂದಿರುವುದಾಗಿ” ಮಹಿಳೆಯರು ತಿಳಿಸಿದ್ದಾರೆ.