Kalaburagi | ಲೋಕಯುಕ್ತರ ಬಲೆಗೆ ಬಿದ್ದ ಪೊಲೀಸ್ ಪೇದೆಗಳು
ಕಲಬುರಗಿ : ಸಿನೀಮಯ ರೀತಿಯಲ್ಲಿ ಚೇಸ್ ಮಾಡಿ ಲಂಚ ಸ್ವೀಕರಿಸುತ್ತಿರುವ ಇಬ್ಬರು ಪೇದೆಗಳನ್ನ ಲೋಕಾಯುಕ್ತ ತಂಡ ಹಿಡಿದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಅಕ್ರಮ ಮರಳು ಸಾಗಾಟ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜೇವರ್ಗಿ ಠಾಣೆ ಅವಣ್ಣ ಮತ್ತು ಶಿವರಾಯ ಈ ಇಬ್ಬರೂ ಪೇದೆಗಳು ಲೋಕಯುಕ್ತಕ್ಕೆ ಲಾಕ್ ಆಗಿದ್ದಾರೆ.
ಶಹಪುರದ ಅಖಿಲ್ ಎಂಬುವವರು ನೀಡಿದ ದೂರಿನ ಮೇರೆಗೆ ಫೀಲ್ಡಿಗಿಳಿದ ಲೋಕಾ ಟೀಂ ದಾಳಿ ಮಾಡಿದೆ.
ಹೈವೇ ರೋಡಲ್ಲಿ ವೆಹಿಕಲ್ ಅಡ್ಡಗಟ್ಟಿ ಟ್ರಾಪ್ ಮಾಡಿದ ಹಣದ ಸಮೇತ ಒಬ್ಬ ಹೆಡ್ ಕಾನ್ಟೇಬಲ್ ಮತ್ತೊಬ್ಬ ಪೋಲೀಸ್ ಜೀಪ್ ಚಾಲಕ ಒಟ್ಟು ಇಬ್ಬರನ್ನ ಬಂಧಿಸಿ ಎಫ್ಐಆರ್ ಮಾಡಿದ್ದಾರೆ.