Kalburgi: ಮಲಗಿದ್ದ ಮಹಿಳೆ ಮೇಲೆ ಎಡೆ ಎತ್ತಿ ಕುಳಿತ ನಾಗರಹಾವು
ಹೊಲದಲ್ಲಿ ಮಲಗಿದ್ದ ಮಹಿಳೆ ಮೇಲೆ ನಾಗರಹಾವು ಎಡೆ ಎತ್ತಿ ಕುಳಿತ ಭಯಾನಕ ಘಟನೆ ಕಲಬುರಗಿಯ ಜಿಲ್ಲೆಯಲ್ಲಿ ನಡೆದಿದೆ.
ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದ ಭಾಗಮ್ಮ ಬಡದಾಳ್ ಎಂಬುವರ ಜಮೀನಿನಲ್ಲಿ ಘಟನೆ ನಡೆದಿದ್ದು, ತಮ್ಮ ಜಮೀನಿನಲ್ಲಿ ಮಲಗಿದ್ದ ವೇಳೆ ಭಾಗಮ್ಮ ಬಡದಾಳ್ ಮೈ ಮೇಲೆ ನಾಗರ ಹಾವೊಂದು ಎಡೆ ಎತ್ತಿ ಕುಳಿತಿದೆ.
ಹಾವು ಬಂದಿದ್ದನ್ನ ನೋಡಿ ಭಯಗೊಂಡ ಭಾಗಮ್ಮ ಒಂದು ಚೂರೂ ಕದಲದೆ ಕಾಪಾಡು ಶ್ರೀಶೈಲ ಮಲ್ಲಯ್ಯ ಅಂತಾ ಪ್ರಾರ್ಥಿಸಿದ್ದಾಳೆ. ಕೆಲ ಹೊತ್ತಿನ ನಂತರ ಪವಾಡ ರೀತಿಯಲ್ಲಿ ನಾಗರಹಾವು ಸ್ಥಳದಿಂದ ಕಾಲ್ಕಿತ್ತಿದೆ. ಮಹಿಳೆ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತ್ತಿದ್ದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.








