ಬಸ್ – ಕರ್ ನಡುವೆ ಡಿಕ್ಕಿ 24 ಮಂದಿಗೆ ಗಾಯ , ಮೂವರ ಸ್ಥಿತಿ ಚಿಂತಾಜನಕ
ಬಸ್ ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ್ದು ಭೀಕರ ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.. ಈ ಘಟನೆಯು ಕಲಬುರಗಿಯ ಹೊರವಲಯದ ಹುಮನಾಬಾದ್ ರಿಂಗ್ ರಸ್ತೆಯಲ್ಲಿ ನಡೆದಿದೆ..
ಲಿಕ್ವಿಡ್ ಸಿಮೆಂಟ್ ಟ್ಯಾಂಕರ್ ಮತ್ತು ಖಾಸಗಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.. ಪರಿಣಾಮ ಎರಡೂ ವಾಹನಗಳೂ ಪಲ್ಟಿಯಾಗಿವೆ. ಘಟನೆಯಿಂದ ಬಸ್ ನಲ್ಲಿದ್ದ 24 ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಹುಮನಾಬಾದ್ ಕಡೆಯಿಂದ ಬರುತ್ತಿದ್ದ ಖಾಸಗಿ ಕಂಪನಿಯ ಬಸ್ ಮತ್ತು ಖರ್ಗೆ ಸರ್ಕಲ್ ನಿಂದ ಹುಮನಾಬಾದ್ ರಿಂಗ್ ರಸ್ತೆ ಕಡೆ ಬರುತ್ತಿದ್ದ ಟ್ಯಾಂಕರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗ್ತಿದೆ. ಬೃಹತ್ ಕ್ರೈನ್ ಮೂಲಕ ಪಲ್ಟಿಯಾಗಿ ಬಿದ್ದಿದ್ದ ಎರಡೂ ವಾಹನಗಳನ್ನ ಮೇಲಕ್ಕೆತ್ತಲಾಗಿದೆ. ಇನ್ನೂ ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ..
Kalburgi : Road Accident , 24 injured