Kalburgi | ಕುಂಕುಮ ತಂಟೆಗೆ ಬಂದ್ರೆ ಸುಮ್ಮನಿರುವುದಿಲ್ಲ kalburgi-sindhura-abhiyan saaksha tv
ಕಲಬುರಗಿ : ಅರಿಶಿಣ, ಕುಂಕುಮ, ಹೂವು, ಬಳೆ, ಮಹಿಳೆಯರು ಮುಡಿಯೋದು. ಇದು ನಮ್ಮ ಹಿಂದು ಸಂಪ್ರದಾಯ.
ಇದರ ತಂಟೆಗೆ ಬಂದರೇ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಎಚ್ಚರಿಕೆ ನೀಡಿದ್ದಾರೆ.
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಬಿಂದಿ ಹಾಕೊಂಡು ಶಾಲೆಗೆ ಬರ್ತೀರಲ್ಲಾ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪ್ರಶ್ನಿಸಿದ್ದರು.
ಇದಕ್ಕೆ ಆಕ್ರೋಶಗೊಂಡಿರುವ ಹಿಂದೂಪರ ಸಂಘಟನೆ ಕಾರ್ಯಕರ್ತೆ ದಿವ್ಯಾ ಹಾಗರಗಿ ಅವರ ನೇತೃತ್ವದಲ್ಲಿ ಸಿಂಧೂರ ಚಳುವಳಿ ಆರಂಭಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದಿವ್ಯಾ ಹಾಗರಗಿ, ಕುಂಕುಮದ ತಂಟೆಗೆ ಬಂದರೇ ನಾವು ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಆಗಬೇಕಾಗುತ್ತದೆ.
ಮಹಿಳೆಯರು ಅರಿಶಿಣ, ಕುಂಕುಮ, ಹೂವು, ಬಳೆ ಮುಡಿಯೋದು ನಮ್ಮ ಹಿಂದು ಸಂಪ್ರದಾಯ. ಭಾರತ ಹಿಂದೂ ರಾಷ್ಟ್ರ ಎಂದು ಹೇಳಿದರು.
ಅಲ್ಲದೇ ಹಿಜಾಬ್ ವಿಚಾರ ಕೋರ್ಟ್ ನಲ್ಲಿರುವ ಕಾರಣ ಅದರ ಬಗ್ಗೆ ಮಾತನಾಡಲ್ಲ, ಆದ್ರೆ ಕುಂಕುಮ ವಿಚಾರಕ್ಕೆ ಬಂದ್ರೆ ನಾವು ಸುಮ್ಮನೆ ಇರಲ್ಲ ಎಂದಿದ್ದಾರೆ,









