ADVERTISEMENT
Wednesday, February 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಎಲ್ಲವೂ ಇದ್ರೂ ಏನೂ ಇರಲಿಲ್ಲ… ಬಂದಷ್ಟೇ ವೇಗವಾಗಿ ಎಲ್ಲವನ್ನೂ ಕಳೆದುಕೊಂಡವಳು ಮಿನುಗುತಾರೆ..!

Namratha Rao by Namratha Rao
October 28, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಎಲ್ಲವೂ ಇದ್ರೂ ಏನೂ ಇರಲಿಲ್ಲ… ಬಂದಷ್ಟೇ ವೇಗವಾಗಿ ಎಲ್ಲವನ್ನೂ ಕಳೆದುಕೊಂಡವಳು ಮಿನುಗುತಾರೆ..!

ಮಿಂಚು ಎಂಬುದೇ ಹಾಗೆ ಅದು ಸದಾಕಾಲ ಉಳಿಯುವುದಿಲ್ಲ. ಸಾಧ್ಯವಾದಷ್ಟೂ ಬೆಳಕ ಹೊತ್ತು ತರುತ್ತದೆ, ಮತ್ತು ಬಂದಷ್ಟೇ ವೇಗವಾಗಿ ಮರೆಯಾಗುತ್ತದೆ. ಈಕೆಯ ಜೀವನವೂ ಹಾಗೆಯೇ ಏನೆಲ್ಲವೂ ಇದ್ದರೂ ಏನೂ ಇಲ್ಲದಂತೆ. ಈಕೆ ಒಂದು ಮಿಂಚಿನAತೆ ಹೀಗೆ ಬಂದು ಹಾಗೆ ಹೊರಟವಳು ಮತ್ತು ತನ್ನ ಪುಟ್ಟ ಬದುಕಿನಲ್ಲೂ ಎಲ್ಲವನ್ನೂ ಬಂದಷ್ಟೇ ವೇಗವಾಗಿ ಕಳೆದುಕೊಂಡಳು. ಇದಕ್ಕೇ ಈಕೆಯನ್ನು ಒಂದು ರೀತಿಯ ದುರಂತ ನಾಯಕಿ ಎನ್ನಬಹುದು. ನಾನು ಇಷ್ಟೆಲ್ಲಾ ಹೇಳುತ್ತಿರುವುದು ಅದೇ ಕಲ್ಪನಾ ಎಂಬ ಮಿನುಗುತಾರೆಯ ಬಗ್ಗೆ.

Related posts

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

February 4, 2026
ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

February 4, 2026

ಅದೊಂದು ದಿನ ಗೋಟೂರು ಬಂಗಲೆಯಲ್ಲಿ ನಿರ್ಜೀವವಾಗಿ ಬಿದ್ದಿದ್ದ ಈ ನಟಿಯ ಕಣ್ಣುಗಳಲ್ಲಿ ಇನ್ನೂ ಅರ್ಥಂಬರ್ಧ ಈಡೇರಿದ ಹಾಗೂ ಪೂರ್ತಿಯಾಗಿ ಈಡೇರದ ಸಾವಿರ ಸಾವಿರ ಕನಸುಗಳಿದ್ದವು. ಸುಖವೆಂಬ ಬಿಸಿಲುಕುದುರೆಯ ಬೆನ್ನೇರಿದ ಈ ಚೆಲುವೆ ಕಾಡು ಮೇಡುಗಳಲ್ಲಿ ಕವಲುದಾರಿಗಳಲ್ಲಿ ಅಲೆದಲೆದು ಸುಸ್ತಾಗಿ ಕೊನೆಗೊಂದು ದಿನ ತಾನು ಇಷ್ಟಪಟ್ಟು ಉಳಿಯುತ್ತಿದ್ದ ಗೋಟೂರು ಐಬಿಯಲ್ಲಿ ಪತ್ರವೊಂದನ್ನು ಕೈಲಿಡಿದು ಮಲಗಿಬಿಟ್ಟರು.

ಈಕೆಯ ಹುಟ್ಟು ಮಂಗಳೂರಿನಲ್ಲಿ. ಹುಟ್ಟು ಹೆಸರು ಶರತ್ ಲತಾ ಎಂದು. ಈ ಹುಟ್ಟು ಅಷ್ಟು ಅಭದ್ರತೆಯ ಕುಟುಂಬದ್ದಾಗಿರಲಿಲ್ಲ. ತಂದೆ ಒಂದು ಕಂಪನಿಯ ಪ್ರತಿನಿಧಿಯಾಗಿದ್ದರು. ತಾಯಿಯೂ ಅಷ್ಟೇ ಮರ್ಯಾದಸ್ಥ ಹೆಣ್ಣುಮಗಳಾಗಿದ್ದರು. ಇಂಥ ಕುಟುಂಬದಲ್ಲಿ ಜನಿಸಿದ ಕಲ್ಪನಾ ಬಾಲ್ಯದಿಂದಲೇ ವಿಶೇಷವಾದ ಸೌಂದರ್ಯ ಪ್ರಜ್ಞೆಯೊಂದನ್ನು ಮೈಗೂಡಿಸಿಕೊಂಡಿದ್ದರು. ತನ್ನ ನಡೆ ನುಡಿ ಹಾವ ಭಾವಗಳ ಮೂಲಕ ಕಲ್ಪನಾ ಸುತ್ತಲಿದ್ದವರಿಗೆ ಆಕರ್ಷಣೆಯ ಕೇಂದ್ರಬಿAದುವಾಗಿರುತ್ತಿದ್ದರು. ಶಾಲಾ ದಿನಗಳಲ್ಲಿಯೇ ಕಲ್ಪನಾ ನಟನೆಯ ಬೆನ್ನತ್ತಿದ್ದಾಗಿತ್ತು. ಚಿಕ್ಕಪುಟ್ಟ ನಟನೆ ಹಾಗೂ ನೃತ್ಯ ಮಾಡುತ್ತಾ ಒಂದು ಮಟ್ಟಕ್ಕೆ ಹೆಸರು ಸಂಪಾದಿಸಿದರು ಕಲ್ಪನಾ. ಹೀಗೆ ಆರಂಭವಾದ ಕಲ್ಪನಾರ ಬಣ್ಣದ ಜೀವನ ಅದ್ಯಾವ ಸಂದರ್ಭದಲ್ಲಿ ವೃತ್ತಿಯಾಗಿ ಮಾರ್ಪಟ್ಟಿತೋ ಗೊತ್ತಿಲ್ಲ. ಬದುಕಿನಲ್ಲಿ ಎಲ್ಲವೂ ಕೆಲವು ಪುಟಗಳನ್ನು ತಿರುಗಿಸುವುದರೊಳಗಾಗಿ ಬದಲಾಗಿಬಿಟ್ಟಿತ್ತು. ಉತ್ತರ ಕರ್ನಾಟಕ ಭಾಗದಿಂದ ಕಲ್ಪನಾ ತನ್ನ ಬಣ್ಣದ ಬದುಕನ್ನು ಆರಂಭಿಸಿಬಿಟ್ಟರು. ಉತ್ತರ ಕರ್ನಾಟಕ ಎಂಬುದೇ ಹಾಗೆ ಅದು ತನ್ನ ಮಡಿಲಲ್ಲಿ ಅದೆಷ್ಟೋ ಕಲಾವಿಧರನ್ನು ಸಾಕಿ ಸಲಹಿದೆ, ಹುಟ್ಟಿಗೆ ಕಾರಣವಾಗಿದೆ. ಬದುಕಿನ ದಾರಿ ತೋರಿದೆ, ಉಳಿದ ಭಾಗಗಳಲ್ಲಿ ಕಲಾವಿಧರೆಂದರೆ ಕಡೆಯಾಗಿ ನೋಡುತ್ತಿದ್ದ ಕಾಲಘಟ್ಟದಲ್ಲಿಯೇ ಉತ್ತರ ಕರ್ನಾಟಕದ ಜನ ಕಲಾವಿಧರನ್ನು ಆರಾಧಿಸುತ್ತಿದ್ದರು ಎಂಬುದು ಇತಿಹಾಸ ಓದಿದ ಎಲ್ಲರಿಗೂ ಗೊತ್ತಿರುವ ವಿಚಾರ.

ತನ್ನ ವಿಭಿನ್ನವಾದ ಮಾತಿನ ಶೈಲಿ ಹಾಗೂ ಅಸಂಪ್ರದಾಯಿಕವಾದ ಜೀವನ ಮತ್ತು ಮಾಡ್ರನ್ ಉಡುಪುಗಳಿಂದಲೇ ಹೆಸರಾಗಿದ್ದ ಕಲ್ಪನಾ ಒಂದು ಕಾಲಕ್ಕೆ ಗಿಡ್ಡ ಸೆರಗು ಹಾಗೂ ದೊಡ್ಡ ಓಲೆಯ ಹೊಸ ಟ್ರೆಂಡ್ ಒಂದನ್ನು ಸೃಷ್ಟಿಸಿದ್ದರು ಎಂದರೆ ನೀವು ನಂಬಲೇ ಬೇಕು. ಇಂಥ ಕಲ್ಪನಾ ತನ್ನ ಸಿನಿಮಾ ಬದುಕಿಗಾಗಿ ಆರಂಭದಲ್ಲಿ ಆಶ್ರಯಿಸಿದ್ದು ಹಾಸ್ಯಬ್ರಹ್ಮ, ಖ್ಯಾತ ನಟ ನರಸಿಂಹರಾಜು ಅವರನ್ನು. ನಟ ನರಸಿಂಹರಾಜರ ಬೆರಳಿಡಿದು ಸಿನಿಮಾರಂಗದಲ್ಲಿ ನಡೆಯುವುದು ಕಲಿತ ಕಲ್ಪನಾ ಜೀವನದ ಅನಿವಾರ್ಯತೆಗೆ ಸಿಲುಕಿ ಮುಂದೆ ಹಲವು ಮರಗಳ ನರಳು ಹುಡುಕಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸವಲ್ಲದೇ ಮತ್ತೇನು. ಸಿನಿಮಾದಲ್ಲಿ ಕಲ್ಪನಾ ನಟಿಸಿದ ಮೊದಲ ಸಿನಿಮಾ ಬಿ.ಆರ್ ಪಂತಲೂ ಅವರ “ಸಾಕು ಮಗಳು” ಈ ಚಿತ್ರದಲ್ಲಿ ಇವರ ನಟನೆ ನೋಡಿದ ಜನ ಕನ್ನಡಕ್ಕೆ ಮತ್ತೊಬ್ಬ ಭರವಸೆಯ ನಟಿ ಸಿಕ್ಕಳೆಂದು ಸಂತೋಷ ಪಟ್ಟಿದ್ದರು. ಈ ಭರವಸೆ ಸುಳ್ಳಾಗಲೂ ಇಲ್ಲ. ಆನಂತರದಲ್ಲಿ ಕಲ್ಪನಾ ನಟಿಸಿದ ಹಲವು ಸಿನಿಮಾಗಳು ಕನ್ನಡದ ಪಾಲಿಗೆ ಮೈಲಿಗಲ್ಲು ಸಿನಿಮಾಗಳಾಗಿವೆ.

೧೯೪೩ರ ಜುಲೈ ೧೮ರಂದು ಜನಿಸಿದ ಕಲ್ಪನಾ ಕೇವಲ ಇಪ್ಪತ್ತನೇ ವಯಸ್ಸಿಗೆ ಅಂದರೆ ೧೯೬೩ಕ್ಕೆ ನಾಯಕಿಯಾಗಿ ಗುರುತಿಸಿಕೊಂಡರು. ಆರಂಭದಲ್ಲಿ ನರಸಿಂಹರಾಜು ಅವರ ಕೈಹಿಡಿದು ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ ನಂತರದಲ್ಲಿ ಪುಟ್ಟಣ್ಣ ಕಣಗಾಲರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಈ ಸಂದರ್ಭದಲ್ಲಿ ಎಲ್ಲವನ್ನೂ ಮೀರಿದ ಸಂಬAಧವೊAದು ಪುಟ್ಟಣ್ಣ ಕಣಗಾಲ್ ಮತ್ತು ಕಲ್ಪನಾ ನಡುವೆ ಬೆಳೆದುನಿಂತಿತ್ತು. ಕಲ್ಪನಾರ ಬದುಕಿನ ಯಾವ ಸಂಬAಧಗಳನ್ನೂ ನಾವು ಸಭ್ಯತೆಯ ಚೌಕಟ್ಟಿನಲ್ಲಿ ನಿಂತು, ಅಕ್ರಮವೆಂಬ ಕನ್ನಡಕ ಧರಿಸಿ ನೋಡಬಾರದು. ಮತ್ತು ಅವುಗಳನ್ನು ಹಾಗೆ ಒಂದು ಹೆಣ್ಣುಗಂಡಿನ ನಡುವೆ ವಾಂಛೆಗಳಿಗಾಗಿ ಬೆಳೆದಿದ್ದ ಸಂಬAಧಗಳೆAದು ನೋಡಿದರೆ ಕಲ್ಪನಾ ಎಂಬ ಹೆಣ್ಣೊಬ್ಬಳನ್ನು ನಾವು ಸರಿಯಾಗಿ ಅರ್ಥೈಸಲು ಸಾಧ್ಯವೇ ಇಲ್ಲ. ಅದು ಅವರ ಬದುಕಿನ ಅನಿವಾರ್ಯತೆಯೂ ಆಗಿದ್ದರಿಂದ ಅದನ್ನು ಹಗುರವಾಗಿ ಪರಿಗಣಿಸದಿರುವುದೇ ಒಳ್ಳೆಯದು. ಕಲ್ಪನಾರ ಮನಸ್ಥಿತಿಯೇ ಅಂಥದ್ದು ಅವರು ಯಾರೊಂದಿಗಿದ್ದರೂ ಅವರೊಂದಿಗೆ ಒಂದು ಭಾವನಾತ್ಮಕವಾದ ಅನುಬಂಧ ಬೆಳೆಸಿಕೊಂಡುಬಿಡುತ್ತಿದ್ದರು. ಅವರ ಈ ಸ್ವಭಾವವನ್ನು ಸ್ವತಃ ಅವರ ಜೊತೆಗಿದ್ದವರೂ ಒಂದು ಕಾಲಕ್ಕೆ ಸಹಿಸಿಕೊಳ್ಳುವುದು ಅಸಾದ್ಯವಾಗುತ್ತಿತ್ತು. ಹೀಗಾಗಿಯೇ ಕಲ್ಪನಾರ ಬದುಕಿನಲ್ಲಿ ಅನೇಕ ಪಾತ್ರಗಳು ಹೀಗೆ ಬಂದು ಹಾಗೆ ಹೊರಟವು. ಒಬ್ಬ ಹೆಣ್ಣಾಗಿ ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ ಎಂಬ ಕೊರಗು ಕಡೆಯವರೆಗೂ ಆಕೆಯ ಮನಸ್ಸನ್ನು ಕಿತ್ತು ತಿನ್ನುತ್ತಲೇ ಇತ್ತು. ಒಮ್ಮೆ ಶೂಟಿಂಗ್ ಗೆಂದು ಹೊರದೇಶಕ್ಕೆ ಹೋದಾಗ ಕಲ್ಪನಾ ಪುಟ್ಟಣ್ಣನವರಿಗೆ ಒಂದು ಪತ್ರ ಬರೆಯುತ್ತಾರೆ. ಆ ಪತ್ರದ ಉದ್ದಕ್ಕೂ ಕಲ್ಪನಾ ತನ್ನನ್ನು ಅನ್ಯತಾ ಭಾವಿಸದಂತೆಯೂ, ಈ ಪತ್ರ ವ್ಯವಹಾರ ಕೇವಲ ಅವರ ಪ್ರಾಮಾಣಿಕ ಅಭಿಮಾನದಿಂದಲೇ ಹೊರತು, ಪಾತ್ರಗಳನ್ನು ಗಿಟ್ಟಿಸಿಕೊಳ್ಳಲಲ್ಲ ಎಂಬುದಾಗಿಯೂ ಸ್ಪಷ್ಟಪಡಿಸುತ್ತಲೇ ಹೋಗುತ್ತಾರೆ. ಅಂತೆಯೇ ಆ ಪತ್ರದಲ್ಲಿರುವ ಮತ್ತೊಂದು ಸಾಲೆಂದರೆ, ‘ ನನ್ನನ್ನು ಅರ್ಥ ಮಾಡಿಕೊಂಡಿರುವ ನಿಮಗೆ (ಹೆಣ್ಣಾಗಿ ಅಲ್ಲದಿದ್ದರೂ ಒಬ್ಬ ನಟಿಯಾಗಿ) ನಾನು ಬರೆಯಲೇ ಬೇಕಿರುವ ಪತ್ರವಿದು’. ಈ ಸಾಲಿನಲ್ಲಿ ನಾವು ಗಮನಿಸಬೇಕಿರುವ ಅಂಶವೆAದರೆ ಆ ಬ್ರಾಕೇಟಿನಲ್ಲಿ ಕಲ್ಪನಾ ಬರೆದಿರುವ ಸಾಲು. ಅಂದರೆ ಒಬ್ಬ ಹೆಣ್ಣಾಗಿ ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ ಎಂಬ ಕೊರಗು ಎಷ್ಟರ ಮಟ್ಟಿಗೆ ಅವರ ಜೀವ ಹಿಂಡುತ್ತಿತ್ತೆAದು ನಾವು ತಿಳಿದುಕೊಳ್ಳಬಹುದು.

‘ಬೆಳ್ಳಿ ಮೋಡ’, ‘ಗೆಜ್ಜೆಪೂಜೆ’, ‘ಶರಪಂಜರ’, ಎರಡುಕನಸು’, ‘ಗಂಧದಗುಡಿ’, ಹೀಗೆ ‘ಸಾಕು ಮಗಳು’ ಚಿತ್ರದಿಂದ ಹಿಡಿದು, ಅವರ ಕೊನೆಯ ಸಿನಿಮಾ ‘ಮಲೆಯ ಮಕ್ಕಳು’ವರೆಗೂ ಸಾಲು ಸಾಲು ಸಿನಿಮಾಗಳಲ್ಲಿ ಅಮೋಘವೆಂಬ ನಟನೆ ಮಾಡಿದ್ದ ಕಲ್ಪನಾ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಗಟ್ಟಿ ಶೈಲಿಯೊಂದನ್ನು ರೂಢಿಸಿಕೊಂಡಿದ್ದರು. ಅದರಿಂದ ಹೊರಬರುವಲ್ಲಿ ಅವರು ಸೋತು ಹೋಗಿದ್ದರು. ಈ ನಡುವೆ “ಬೆಳ್ಳಿಮೋಡದ ಅಂಚಿAದ ಓಡಿ ಬಂದ ಮಿನುಗುತಾರೆ” ಎಂಬ ಗೀತೆಯೊಂದು ಕಲ್ಪನಾರಿಗಾಗಿಯೇ ಬರೆದಂತಿತ್ತು. ಈ ಹಾಡಿನಿಂದಾಗಿ ಜನ ಮಿನುಗುತಾರೆ ಎಂದೇ ಗುರುತಿಸಲಾರಂಭಿಸಿದರು. ನಂತರ ಅದೊಂದು ದಿನ ಸಂಸ್ಥೆಯೊAದು ಅಧಿಕೃತವಾಗಿ ‘ಮಿನುಗುತಾರೆ’ ಎಂಬ ಬಿರುದು ನೀಡಿ ಗೌರವಿಸಿತು.

ತನ್ನ ನಟನೆಯ ಹಾದಿಯಲ್ಲಿ ಹನ್ನೆರಡುಬಾರಿ ರಾಜ್ಯ ಪ್ರಶಸ್ತಿಯನ್ನೂ ಸೇರಿ ಹಲವು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದ ಮಿನುಗುತಾರೆ ವೈಯಕ್ತಿಕ ಬದುಕಿನಲ್ಲಿ ಅನುಭವಿಸಿದ ನೋವು, ಅವಮಾನ, ಯಾತನೆಗಳನ್ನು ಕೇಳಿದರೆ ಎಂಥವರಿಗೂ ಒಂದು ಕ್ಷಣ ಮರುಕ ಹುಟ್ಟದೇ ಇರಲಾರದು. ವೃತ್ತಿಯಲ್ಲಿ ಹೀಗೆ ಊರ್ಧ್ವಮುಖಿಯಾಗಿ ಬೆಳೆಯುತ್ತಲೇ ಇದ್ದ ಕಲ್ಪನಾರಿಗೆ ಇದ್ದ ಕೊರತೆಗಳಾದರೂ ಏನು ಎಂದು ನೋಡಿದರೆ ಅದಕ್ಕೆ ಸಿಗುವ ಮೊಟ್ಟ ಮೊದಲ ಉತ್ತರ ಚರ್ಮದ ಸಮಸ್ಯೆ.

ಹೌದು ತನ್ನ ವಿಶಿಷ್ಟ ಉಡುಪುಗಳಿಂದ ಗುರುತಿಸಿಕೊಂಡಿದ್ದ ಕಲ್ಪನಾ ಒಂದು ಕಾಲಘಟ್ಟದಲ್ಲಿ ತುಂಬು ತೋಳಿನ ಕುಪ್ಪಸಗಳನ್ನೇ ಧರಿಸುತ್ತಿದ್ದರು. ಯಾರಾದರೂ ಅದನ್ನು ಬದಲಿಸುವಂತೆ ಹೇಳಿದರೆ ಹಿಂದೆ ಮುಂದೆ ನೋಡದೇ ರೇಗಿಬಿಡುತ್ತಿದ್ದರು. ಇದರಿಂದ ಹಲವರಿಗೆ ಅದು ಉದ್ಧಟತನದಂತೆ ಕಾಣುತ್ತಿತ್ತು. ಆದರೆ ಕಲ್ಪನಾ ಹೀಗೆ ಸಿಡುಕುವುದಕ್ಕೂ ಒಂದು ಬಲವಾದ ಕಾರಣವಿತ್ತು. ಅವರಿಗೆ ದಿನಕಳೆದಂತೆ ಚರ್ಮದ ಸಮಸ್ಯೆ ಉಲ್ಬಣಿಸತೊಡಗಿತ್ತು. ಎರಡೂ ಕೈಗಳ ಧರ್ಮ ಪೊರೆಬಿಟ್ಟಂತಾಗುತ್ತಿತ್ತು. ಮುಖದ ಚವið ತನ್ನ ಕಾಂತಿ ಕಳೆದುಕೊಳ್ಳತೊಡಗಿತು, ಇದನ್ನು ಮುಚ್ಚಿಡಲು ಪ್ರಯತ್ನಿಸಿದಾಗ ಮೇಕಪ್ ಓವರ್ ಆಗುತ್ತಿತ್ತು. ಇದನ್ನೆಲ್ಲಾ ಯಾರ ಬಳಿಯೂ ಹೇಳಿಕೊಳ್ಳಲಾಗುತ್ತಿರಲಿಲ್ಲ. ಹೀಗಾಗಿ ಯಾರಾದರೂ ಪ್ರಶ್ನಿಸಿದಾಗ ಅವರ ಮೇಲೇ ರೇಗಾಡಿ ‘ಈಯಮ್ಮನಿಗೆ ಅಹಂಕಾರ’ ಎನಿಸಿಕೊಂಡುಬಿಟ್ಟರು. ಕೆಲವೊಮ್ಮ ಆಪ್ತರ ಮುಂದೇ ಈ ಸಮಸ್ಯೆಯಿಂದಾಗಿ ಕಣ್ಣೀರು ಹಾಕಿದ್ದೂ ಉಂಟು.

ಹೀಗೆ ದಿನಕಳೆದಂತೆ ಕಲ್ಪನಾ ಎಲ್ಲರಿಂದಲೂ ದೂರಾಗಿ ತನ್ನದೇ ಲೋಕದಲ್ಲಿರತೊಡಗಿದರು. ‘ಎರಡು ಕನಸು’ ತೆರೆಕಾಣುವಷ್ಟರಲ್ಲಿ ಕಲ್ಪನಾರದ್ದು ಓವರ್ ಆಕ್ಟಿಂಗ್ ಎಂಬುದು ಮನೆಮಾತಾಯಿತು. ಇದಿಷ್ಟೇ ಆಗಿದ್ದರೆ ಬಹುಶಃ ಕಲ್ಪನಾ ಇನ್ನೂ ಕೆಲಕಾಲ ನಮ್ಮೊಂದಿಗಿರುತ್ತಿದ್ದರೇನೋ, ಆದರೆ ಆ ನಂತರದ ಅಷ್ಟೂ ದಿನಗಳು ಕಲ್ಪನಾ ಬದುಕಿನ ಕಪ್ಪುಪುಟಗಳಾಗಿಯೇ ಬರೆಯಲ್ಪಟ್ಟಿದ್ದವು. ಚಿತ್ರರಂಗದಲ್ಲಿ ಅವಕಾಶಗಳಿಲ್ಲದಂತಾಯಿತು. ಹತ್ತಿರವಿದ್ದವರು ದೂರವಾದರು. ಕಲ್ಪನಾ ಒಬ್ಬಂಟಿಯಾಗತೊಡಗಿದರು. ನಂಬಿದ ಬಣ್ಣದ ಲೋಕ ಇವರನ್ನು ಬಲವಂತವಾಗಿ ಹೊರದಬ್ಬಲಾರಂಭಿಸಿತು. ನಂತರ ಕಲ್ಪನಾ ಅನಿವಾರ್ಯವಾಗಿ ಮತ್ತೆ ರಂಗಭೂಮಿಯ ಕಡೆ ಮುಖಮಾಡಬೇಕಾಯಿತು. ಇಷ್ಟವಿದ್ದರೂ ಇಲ್ಲದಿದ್ದರೂ ರಂಗಮAಚದ ಮೇಲೆ ನಟಿಸಬೇಕಾಯಿತು. ಈ ಸಮಯದಲ್ಲಿ ಕಲ್ಪನಾ ಎಂಬ ಹೆಸರಿಗೆ ಅಂಟಿಕೊAಡದ್ದೇ ‘ಗುಡಿಗೇರಿ ಬಸವರಾಜು’ ಎಂಬ ಹೆಸರು.

ಗುಡಿಗೇರಿ ಎಂದರೆ ನೆನಪಾಗುವುದೇ ಈ ಬಸವರಾಜು. ಇವರಿಲ್ಲದೆಯೇ ಕಲ್ಪನಾರ ಕಥೆ ಅಪೂರ್ಣ. ಈ ಬಸವರಾಜರಿಗೆ ಆಗಿನ ಕಾಲಕ್ಕೆ ಯಾವ ಸಿನಿಮಾ ಸ್ಟಾರ್ ಗೂ ಕಡಿಮೆ ಇಲ್ಲದಂತಾ ವರ್ಚಸ್ಸಿತ್ತು. ಉತ್ತರ ಕರ್ನಾಟಕದ ಗೋಡೆ ಗೋಡೆಗಳ ಮೇಲೆ ಕಲ್ಪನಾ ಹಾಗೂ ಗುಡಿಗೇರಿ ಬಸವರಾಜರ ಪೋಸ್ಟರ್ ಗಳು ರಾರಾಜಿಸತೊಡಗಿದವು. ಮಿನುಗುತಾರೆ ಕಲ್ಪನಾ ಒಂದು ನಾಟಕ ಕಂಪನಿಯಲ್ಲಿ ಹೀಗೆ ತೊಡಗಿಸಿಕೊಂಡದ್ದು ಹಲವರಿಗೆ ಆಶ್ಚರ್ಯ ಮತ್ತು ಕೆಲವರಿಗೆ ಕುಕ, ಇನ್ನೂ ಕೆಲವರಿಗೆ ಅದು ಸಾಮಾನ್ಯವೆಂಬAತೆಯೂ ಕಂಡಿರಬಹುದು. ಆದರೆ ನರಸಿಂಹರಾಜು, ಪುಟ್ಟಣ್ಣಕಣಗಾಲತರಂತೆ ಗುಡಿಗೇರಿ ಬಸವರಾಜರೂ ಕಲ್ಪನಾ ಬದುಕಿನ ಒಂದು ಅಳಿಸಲಾರದ ಹೆಸರಾಗಲು ಈ ಕಾಲಘಟ್ಟ ಮುಖ್ಯಪಾತ್ರ ವಹಿಸಿದೆ. ಈ ಜೋಡಿ ಮಾಡಿದ ನಾಟಕಗಳೆಲ್ಲವೂ ಜನಮನ ಗೆದ್ದವು. ಕಲ್ಪನಾರಿಗೆ ಇದು ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಸಹಾಯಕವಾಯಿತು. ಆದರೆ ಅಷ್ಟರಲ್ಲಾಗಲೇ ಬಸವರಾಜರೊಂದಿಗೂ ಕಲ್ಪನಾರ ಕಾದಾಟ ಆರಂಭವಾಯಿತು. ಅದೆಷ್ಟೋ ದಿನ ತೆರೆಯ ಹಿಂದೆ ನಡೆದಿದ್ದ ಇವರಿಬ್ಬರ ಜಗಳ ಅದೊಂದು ದಿನ ರಂಗದ ಮೇಲೂ ಮುಂದುವರೆಯಿತು. ನಾಟಕದ ಸಂಭಾಷಣೆಯೊAದರಲ್ಲಿ ಬಸವರಾಜರು “ಹೊಟ್ಟೆಗೆ ತಿನ್ನಲು ಏನೂ ಇಲ್ಲ” ಎಂದಾಗ “ರೊಟ್ಟಿ ತಿನ್ನು” ಎನ್ನಬೇಕಿದ್ದ ಕಲ್ಪನಾ ಅದರ ಬದಲಿಗೆ “ ಏನೂ ಇಲ್ಲದಿದ್ದರೆ ಹೋಗಿ ಹುಲ್ಲು ತಿನ್ನು” ಎಂದರು. ಸಿಟ್ಟಿಗೆದ್ದ ಬಸವರಾಜು “ಎಲ್ಲಿದೆ ಹುಲ್ಲು, ತೋರಿಸು ಅದನ್ನೇ ತಿನ್ನುತ್ತೇನೆ’ ಎಂದು ರಂಗದ ತುಂಬೆಲ್ಲಾ ಹಸುವಿನಂತೆ ಮಂಡಿಯೂರಿ ಸುತ್ತಾಡಿದರು. ಇದನ್ನು ಕಂಡ ಪ್ರೇಕ್ಷಕರು ಬಿದ್ದು ಬಿದ್ದು ನಗಲಾರಂಭಿಸಿದರು. ಅಲ್ಲಿಗೆ ಪರದೆ ಬಿತ್ತು, ಅಂದಿನ ನಾಟಕಕ್ಕೂ ಜೊತೆಗೆ ಕಲ್ಪನಾರ ಬದುಕಿಗು.

ನಂತರ ಏನಾಯಿತು ಎಂದು ಯಾರಿಗೂ ಗೊತ್ತಿಲ್ಲ. ಮಾರನೇ ದಿನ ಬೆಳಿಗ್ಗೆ ಕಲ್ಪನಾರ ಶವ ಗೋಟೂರು ಐಬಿಯಲ್ಲಿತ್ತು. ಅವರ ಮೈ ಹಾಗೂ ಮುಖದ ಮೇಲೆ ಸಣ್ಣ ಸಣ್ಣ ಗಾಯಗಳಾಗಿದ್ದವು. ಮರೆಯಾದ ಮಿನುಗುತಾರೆ ಎಂದು ಪೇಪರಿನಲ್ಲಿ ತಲೆಬರಹಗಳು ಬಂದವು. ಇನ್ನೂ ಅದೆಷ್ಟೋ ತೀರದ ಆಸೆಗಳು ಕಲ್ಪನಾರ ಕಣ್ಣಿನಲ್ಲಿ ಹಾಗೇ ಉಳಿದಿದ್ದವು, ಅವರ ಕೈಲಿದ್ದ ವಜ್ರದ ಉಂಗುರ ಪುಡಿಯಾಗಿ ಅವರ ದೇಹ ಸೇರಿತ್ತು. ಅವರ ಕೈಲೊಂದು ಪತ್ರವಿತ್ತು. ಅದರಲ್ಲಿ ಹೀಗೆ ಬರೆಯಲಾಗಿತ್ತು.

ಮಾನ್ಯ ಪೊಲೀಸ್ ಅಧಿಕಾರಿಗಳಿಗೆ,
ನಿಮಗೆ ನನ್ನ ಕೊನೆಯ ನಮಸ್ಕಾರಗಳು. ನನ್ನ ಮುಖದಮೇಲಿನ ಗಾಯದ ಕಲೆಗಳನ್ನು ನೋಡಿ ತಾವು ಆಶ್ಚರ್ಯ ಪಡಬಹುದು, ನಿನ್ನೆ ನಾಟಕಕ್ಕೆ ಹೋಗುವಾಗ ಕಾರಿಗೆ ಹಸುವೊಂದು ಅಡ್ಡ ಬಂತು. ಅದನ್ನು ಕಾಪಾಡಲು ಹೋಗಿ ಇಷ್ಟು ಗಾಯ ಮಾಡಕೊಂಡAತಾಯಿತು.
ಸಾವು ನಿಜ. ಇದು ನಾನು ಸಂತೋಷದಿAದ ಬರಮಾಡಿಕೊಂಡ ಸಾವು. ಇದಕ್ಕೆ ಯಾರೂ ಕಾರಣರಲ್ಲ. ಬದುಕು ಸಾಕೆನಿಸಿತು. ಇದೇ ನನಗೆ ನೆಮ್ಮದಿ, ಈಗ ನಾನು ಪರಮಸುಖಿ. ನನ್ನ ಅಭಿಮಾನಿಗಳಿಗೂ, ಅಭಿಮಾನಿಗಳಲ್ಲದವರಿಗೂ ನನ್ನ ಕೊನೆಯ ನಮಸ್ಕಾರಗಳು.

ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬಾ
ಮದುವೆಗೋ ಮಸಣಕೋ
ಹೋಗೆಂದಕಡೆ ಹೋಗು
ಮಂಕುತಿಮ್ಮ…

-ಇತಿ, ಕಲ್ಪನಾ

Tags: #saakshatvactressbiographykalpanakannada filmSandalwood
ShareTweetSendShare
Join us on:

Related Posts

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

by Shwetha
February 4, 2026
0

ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದ ಗುತ್ತಿಗೆದಾರರ ಸಂಘವೇ ಈಗ ಭಾರೀ ವಿವಾದದ ಕೇಂದ್ರಬಿಂದುವಾಗಿದೆ. ಸಂಘದೊಳಗೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದ...

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

by Shwetha
February 4, 2026
0

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಪಾವತಿಸದ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. GBA ಅಧೀನದಲ್ಲಿರುವ 5 ನಗರ ಪಾಲಿಕೆ...

SBI ಗ್ರಾಹಕರೇ ಎಚ್ಚರ ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಂದ ಈ ಮೆಸೇಜ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ

SBI ಗ್ರಾಹಕರೇ ಎಚ್ಚರ ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಂದ ಈ ಮೆಸೇಜ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ

by Shwetha
February 4, 2026
0

ಬೆಂಗಳೂರು: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಂತರ ಗ್ರಾಹಕರಿಗೆ ತುರ್ತು ಎಚ್ಚರಿಕೆಯೊಂದನ್ನು ರವಾನಿಸಿದೆ. ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ವ್ಯವಹಾರಗಳು...

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

by Shwetha
February 4, 2026
0

ಬೆಂಗಳೂರು: ಕರ್ನಾಟಕದಲ್ಲಿ ಪಡಿತರ ಚೀಟಿಗಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್...

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

by Shwetha
February 4, 2026
0

ಬೆಂಗಳೂರು: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಉರ್ದು ಶಾಲೆಗಳ ಕಾರ್ಯನಿರ್ವಹಣಾ ಅವಧಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಇದೀಗ ರಾಜಕೀಯ ವಲಯದಲ್ಲಿ ಭಾರೀ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram