ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ : 27 ಕ್ಷೇತ್ರಗಳು `ಕೈ’ಗೆ congress saaksha tv
ಕಲಬುರಗಿ : ಇಲ್ಲಿಯ ಮಹಾನಗರ ಪಾಲಿಕೆಯ ಚುನಾವಣಾಯಲ್ಲಿ ಕಾಂಗ್ರೆಸ್ ಪಕ್ಷ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
55 ವಾರ್ಡ್ ಗಳ ಫಲಿತಾಂಶ ಇಂದು ಪ್ರಕಟವಾಗಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷ 27 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದೆ.
ಇನ್ನುಳಿದಂತೆ ಬಿಜೆಪಿ 23 ವಾರ್ಡ್‍ಗಳಲ್ಲಿ ಗೆಲುವಿನ ನಗೆ ಬೀರಿದೆ. ಜೆಡಿಎಸ್ 4 ವಾರ್ಡ್ ಮತ್ತು ಪಕ್ಷೇತರ 1 ವಾರ್ಡ್‍ಗಳಲ್ಲಿ ಗೆಲುವು ಕಂಡಿದೆ.
ಬಿಜೆಪಿಗೆ ಅಧಿಕಾರ
ಹೌದು..! 55 ವಾರ್ಡ್ ಗಳ ಪೈಕಿ ಕಾಂಗ್ರೆಸ್ ಪಕ್ಷ 27 ಕ್ಷೇತ್ರಗಳಲ್ಲಿ ಗೆಲುವಿನ ನಗೆಬೀರಿದ್ದರೂ ಬಿಜೆಪಿ 23 ಸ್ಥಾನಗಳೊಂದಿಗೆ ಸಂಸದರು, ಶಾಸಕರು, ಎಂಎಲ್‍ಸಿಗಳ ವೋಟ್ ಗಳೊಂದಿಗೆ ಪಕ್ಷೇತರ ಮತ್ತು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಪಾಲಿಕೆ ಚುಕ್ಕಾಣಿಯನ್ನು ಪಡೆಯಬಹುದಾಗಿದೆ.









