“ವಿಕ್ರಮ್” ಬಿಡುಗಡಗೂ ಮುನ್ನ ರಜನಿಕಾಂತ್ ಅವರನ್ನ ಭೇಟಿ ಮಾಡಿದ ಕಮಲ್ ಹಾಸನ್…
ಕಾಲಿವುಡ್ ನ ಲೆಜೆಂಡರಿ ನಟರಾದ ಕಮಲ್ ಹಾಸನ್ ಅವರು ಇತ್ತೀಚೆಗೆ ತಮ್ಮ ಸ್ನೇಹಿತ ಸೂಪರ್ಸ್ಟಾರ್ ರಜನಿಕಾಂತ್ ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ‘ನಾನು ಎಂದಿಗೂ ರಜನಿಕಾಂತ್ ಅವರನ್ನು ದ್ವೇಷಿಸಿಲ್ಲ. ಅವರು ನನ್ನ ವೈರಿಯಲ್ಲ’ ಎಂದು ಕಮಲ್ ಹಾಸನ್ ಹೇಳಿಕೆ ನೀಡಿದ ಎರಡು ದಿನಗಳ ಬಳಿಕ ಈ ಭೇಟಿ ನಡೆದಿರುವುದು ಕುತೂಹಲ ಮೂಡಿಸಿದೆ.
ಕಮಲ್ ಹಾಸನ್ ಮುಂಬರುವ ತಮ್ಮ ಚಿತ್ರ ವಿಕ್ರಮ್ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರನಿರ್ಮಾಪಕ ಲೋಕೇಶ್ ಕನಕರಾಜ್ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಇಬ್ಬರು ನಾಯಕರ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ಧನ್ಯವಾದ ಕಮಲ್ ಹಾಸನ್ ಸರ್! ರಜಿನಿಕಾಂತ್ ಸರ್! ಎಂತಹ ಸ್ನೇಹ! ಸ್ಫೂರ್ತಿದಾಯಕ ಲವ್ ಯೂ ಸರ್” ಎಂದು ಬರೆದುಕೊಂಡಿದ್ದಾರೆ.
Thank you @ikamalhaasan Sir! @rajinikanth Sir! What a friendship! inspiring Love you Sir's❤️❤️❤️ pic.twitter.com/l61EuttG89
— Lokesh Kanagaraj (@Dir_Lokesh) May 29, 2022
ರಜನಿಕಾಂತ್ ಮತ್ತು ಕಮಲ್ ಹಾಸನ್ ತಮಿಳು ಚಿತ್ರರಂಗದಲ್ಲಿ ಅತ್ಯಂತ ಪ್ರೀತಿಪಾತ್ರ ಮತ್ತು ಪ್ರಸಿದ್ಧ ನಟರು. ನಾಲ್ಕು ದಶಕಗಳಿಂದ ಇಬ್ಬರೂ ಸೂಪರ್ಸ್ಟಾರ್ಗಳು ಭಾರತೀಯ ಚಲನಚಿತ್ರೋದ್ಯಮಕ್ಕೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಲ್ಲದೆ ಅವರು ಅಪೂರ್ವ ರಾಗಂಗಲ್, ಅವರ್ಗಲ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಸದ್ಯ ಕಮಲ್ ಹಾಸನ್ ನಟನೆಯ ‘ವಿಕ್ರಮ್ ‘ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ವಾರವೇ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ರಜನಿಕಾಂತ್ ಮನೆಗೆ ಕಮಲ್ ಹಾಸನ್ ಭೇಟಿ ನೀಡಿದ್ದಾರೆ. ವಿಕ್ರಮ್ ಸಿನಿಮಾ ನೋಡುವಂತೆ ಆಹ್ವಾನ ಮಾಡಿದ್ದಾರೆ ಎನ್ನಲಾಗುತ್ತಿದೆ.