ಎಸ್.ಪಿಬಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಕಮಲ್ ಹಾಸನ್ ಭೇಟಿ
ಚೆನ್ನೈ, ಸೆಪ್ಟೆಂಬರ್25: ನಟ, ರಾಜಕಾರಣಿ ಕಮಲ್ ಹಾಸನ್ ಅವರು ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹಾಸನ್, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಲೈಫ್ ಸಪೋರ್ಟ್ ಯಂತ್ರಗಳ ಸಹಾಯದಿಂದ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ಕೂಡ ಬಾಲಸುಬ್ರಹ್ಮಣ್ಯಂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ. ಸಲ್ಮಾನ್ ಖಾನ್ ಅವರು ನಟಿಸಿದ ಬಹುತೇಕ ಎಲ್ಲಾ ಚಲನಚಿತ್ರದ ಹಾಡುಗಳಿಗೆ ಪ್ಲೇಬ್ಯಾಕ್ ದಂತಕಥೆ ಎಸ್ಪಿಬಿ ಧ್ವನಿ ನೀಡಿದ್ದಾರೆ. ಬಾಲಸುಬ್ರಮಣ್ಯಂ ಸರ್, ನನ್ನ ಹೃದಯಾಂತರಾಳದಿಂದ ನಿಮ್ಮ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆ. ಶೀಘ್ರವಾಗಿ ಗುಣಮುಖರಾಗಿ ಬನ್ನಿ. ನನ್ನ ಎಲ್ಲ ಸಿನಿಮಾಗಳ ಹಾಡುಗಳಿಗೆ ಧ್ವನಿಯಾಗಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ.