Kamala Harris
ತಾಯಿಯನ್ನು ನೆನೆದು ಭಾವನಾತ್ಮಕ ಭಾಷಣ ಮಾಡಿದ ಕಮಲಾ ಹ್ಯಾರಿಸ್
ವಾಷಿಂಗ್ಟನ್ : ನನ್ನ ತಾಯಿಗೆ 19 ವರ್ಷದವಳಿದ್ದಾಗ ಭಾರತದಿಂದ ನನ್ನ ತಾಯಿ ಅಮೆರಿಕಗೆ ಬಂದಾಗ ಅವರು ಇದನ್ನು ಊಹಿಸಿರಲಿಲ್ಲ ಎಂದು ಅಮೆರಿಕಾದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ( Kamala Harris ) ಭಾವನಾತ್ಮಕ ಭಾಷಣ ಮಾಡಿದ್ದಾರೆ.
ಜಗತ್ತಿನ ಗಮನ ಸೆಳೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಕಷ ಅಭ್ಯರ್ಥಿ ಜೋ ಬಿಡೆನ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇದರಿಂದಾಗಿ ಅಮೆರಿಕದಾದ್ಯಂತ ಸಂಭ್ರಮ ಮನೆ ಮಾಡಿದೆ. ಇನ್ನೊಂದೆಡೆ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಕೂಡ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದು, ಅಲ್ಲಿನ ಭಾರತೀಯರೂ ಕೂಡ ಸಂಭ್ರಮಿಸುತ್ತಿದ್ದಾರೆ.
ಗೆಲುವಿನ ಬಳಿಕ ಮೊದಲ ಬಾರಿಗೆ ಮಾತನಾಡಿದ ಕಮಲಾ ಹ್ಯಾರಿಸ್, ಪ್ರಜಾಪ್ರಭುತ್ವ ಅಧಿಕಾರವಲ್ಲ, ಅದು ಒಂದು ಪ್ರಕ್ರಿಯೆ ಎಂದು ಹೇಳಿದ್ದಾರೆ.
ಯುಎಸ್ ಅಧ್ಯಕ್ಷೀಯ ಚುನಾವಣೆ – ಜೋ ಬಿಡೆನ್ ಮುಂದಿನ ಅಮೆರಿಕ ಅಧ್ಯಕ್ಷ
ಇದೇ ವೇಳೆ ಅವರ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಅವರನ್ನ ಸ್ಮರಿಸಿದ ಕಮಲಾ ಹ್ಯಾರಿಸ್, ನನ್ನ ತಾಯಿಗೆ 19 ವರ್ಷದವಳಿದ್ದಾಗ ಭಾರತದಿಂದ ನನ್ನ ತಾಯಿ ಅಮೆರಿಕಗೆ ಬಂದಾಗ ಅವರು ಇದನ್ನು ಊಹಿಸಿರಲಿಲ್ಲ.
ಆದರೆ ಈ ರೀತಿಯ ಒಂದು ಕ್ಷಣ ಅನುಭವಿಸಲು ಸಾಧ್ಯವಿರುವ ಅಮೆರಿಕವನ್ನು ಆಳವಾಗಿ ನಂಬಿದ್ದಳು ಭಾವನಾತ್ಮಕ ಭಾಷಣ ಮಾಡಿದ್ದಾರೆ.
ಇನ್ನು ಭಾರಿ ಜಿದ್ದಾಜಿದ್ದಿನ ಹೋರಾಟದಲ್ಲಿ ಟ್ರಂಪ್ ವಿರುದ್ಧ ಗೆದ್ದ ಜೋ ಬಿಡೆನ್ 46ನೇ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ 270 ಮ್ಯಾಜಿಕ್ ನಂಬರ್ ಆಗಿತ್ತು. ಜೋ ಬಿಡೆನ್ ಪೆನ್ಸಿಲ್ವೇನಿಯಾದಲ್ಲಿ ಗೆಲುವು ಸಾಧಿಸುವ ಮೂಲಕ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.
ಉಪಾಧ್ಯಕ್ಷೆಯಾಗಿ ತಮಿಳುನಾಡು ಮೂಲದ ಕಮಲ ಹ್ಯಾರಿಸ್ ಆಯ್ಕೆಯಾಗಿದ್ದಾರೆ.
ಭಾರತೀಯರಿಗೆ ಕಮಲಾ ಹ್ಯಾರಿಸ್ ಅವರು ನಮ್ಮ ದೇಶದವರು ಎಂದು ಸಂಭ್ರಮಿಸುತ್ತಿದ್ದರೇ ಅಮೆರಿಕಾ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಉಪಾಧ್ಯಕ್ಷರಾಗಿರುವುದು ಅಮೆರಿಕನ್ನರಿಗೆ ಸಂತಸ ತಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel