ಸುಶಾಂತ್ ಸಾವಿನ ಪ್ರಕರಣದಲ್ಲಿ ಅತಿ ಹೆಚ್ಚು ಸುದ್ದಿಯಾದ ನಟಿ ಅಂದ್ರೆ ಅದು ಬಾಲಿವುಡ್ ನ ಬೋಲ್ಡ್ ನಟಿ ಕಂಗನಾ ರಣಾವತ್. ಸುಶಾಂತ್ ರದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ವಾದಿಸುತ್ತಲೇ ಬಂದ ಕಂಗನಾ ಬಾಲಿವುಡ್ ನ ದೊಡ್ಡ ದೊಡ್ಡ ಮಂದಿಯ ಹೆಸರನ್ನೇ ಆರೋಪಿಗಳ ಪಟ್ಟಿಗೆ ಸೇರಿಸುತ್ತಾ ಬಂದರೂ. ರಾಜಕೀಯ ಬಣ್ಣವನ್ನ ಹಚ್ಚಿದರೂ. ಮಹಾರಷ್ಟ್ರ ಸಿಎಂ ಪುತ್ರ ಆದಿತ್ಯ ಠಾಕ್ರೆ ಅವರನ್ನು ಪ್ರಕರಣದಲ್ಲಿ ಎಳೆತಂದಿದ್ದರು ಕಂಗನಾ. ಅಷ್ಟೇ ಅಲ್ಲ ಕರಣ್ ಜೋಹರ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಗಳ ವಿರುದ್ಧ ಗುಡುಗಿದ್ದ ಕಂಗನಾ ಸುಶಾಂತ್ ಗೆ ನ್ಯಾಯ ಸಿಗಲೇ ಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದರು. ಈ ಕೇಸ್ ಸಿಬಿಐ ಒಪ್ಪಿಸಬೇಕು ಎಂದು ಒತ್ತಾಯಿಸುತ್ತಲೇ ಮಹಾರಾಷ್ಟ್ರ ಸರ್ಕಾರ ಹಾಗೂ ಮುಂಬೈ ಪೊಲೀಸರ ವಿರುದ್ಧವೂ ಕಿಡಿಕಾರಿದ್ದವರು ಕಂಗನಾ. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಕಂಗನಾ ಸಂತಸಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆದೇಶಿಸುವ ಜೊತೆಗೆ ರಿಯಾ ಸಲ್ಲಿಸಿದ್ದ ಕೇಸ್ ವರ್ಗಾವಣೆ ಅರರ್ಜಿಯನ್ನೂ ಸಹ ತಿರಸ್ಕರಿಸಿದೆ. ಹೀಗಾಗಿ ಈ ವಿಚಾರವಾಗಿ ನಟಿ ಕಂಗನಾ ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ. “ ಮಾನವೀಯತೆ ಗೆದ್ದಿದೆ. ಸುಶಾಂತ್ ಸಿಂಗ್ ಗೆ ನ್ಯಾಯ ಕೊಡಿಸುವುದಕ್ಕಾಗಿ ಹೋರಾಡಿದ ಎಲ್ಲರಿಗೂ ಅಭಿನಂದನೆಗಳು. ಮೊದಲ ಬಾರಿಗೆ ನಾನು ಸಾಮೂಹಿಕ ಪ್ರಜ್ಞೆಯ ಬಲವಾದ ಬಲವನ್ನು ಅನುಭವಿಸಿದೆ. ಅಮೇಜಿಂಗ್” ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ ಕ್ವೀನ್ ಕಂಗನಾ.









