ಬೆಂಗಳೂರು : ನಗರದ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 104ರಲ್ಲಿ ನಿರ್ಮಿಸಲಾಗಿರುವ ಕನಕಗಿರಿ ಉದ್ಯಾನವನವನ್ನು ವಸತಿ ಸಚಿವ ವಿ.ಸೋಮಣ್ಣ ಅವರು ಉದ್ಘಾಟಿಸಿದರು. ಇದೇ ವೇಳೆ 7 ಅಡಿಯ ಕನಕದಾಸರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.
ಸುಮಾರು ಒಂದು ಎಕರೆಯ ನಯನಮನೋಹರ ಕನಕಗಿರಿ ಉದ್ಯಾನವನ, ಕಾರ್ಗಿಲ್ ಹುತಾತ್ಮ ಯೋಧರ ಭಾವಚಿತ್ರಗಳು, ಗೌತಮ ಬುದ್ಧ, ವರ ನಟ ಡಾ.ರಾಜ್ ಕುಮಾರ್, ಸರ್ ಎಂ ವಿಶ್ವೇಶ್ವರಯ್ಯ, ಗಿರೀಶ್ ಕಾರ್ನಡ್, ಯು.ಆರ್ ಅನಂತ್ ಮೂರ್ತಿ, ಚಂದ್ರಶೇಖರ್ ಕಂಬಾರ್ ಪ್ರತಿಮೆಗಳು, ಮಕ್ಕಳ ಆಟದ ಮೈದಾನ, ಜಿಪಿಆರ್ ಎಸ್ ಗಡಿಯಾರ, ಹೊರಾಂಗಣ ವ್ಯಾಯಮ ಪರಿಕರಗಳು ಸೇರಿದಂತೆ ಮೊದಲಾದವುಗಳನ್ನು ಒಳಗೊಂಡಿದೆ. ಸುಮಾರು 3.65 ಕೋಟಿಯಲ್ಲಿ ನಿರ್ಮಿಸಲಾಗಿರುವ ಕನಕಗಿರಿ ಉದ್ಯಾನವನಕ್ಕೆ ಎಲ್ ಇಡಿ ಲೈಟಿಂಗ್ಸ್ ಅಂದವನ್ನು ಹೆಚ್ಚಿಸಿದೆ.
ಇದಕ್ಕೂ ಮುನ್ನ ಸಚಿವರು 1ನೇ ಮುಖ್ಯರಸ್ತೆ ಪ್ರಶಾಂತನಗರ ರಸ್ತೆಗೆ ಮಾಜಿ ಉಪಮೇಯರ್ ಶ್ರೀ ರಮೀಳ ಉಮಾಶಂಕರ್ ರಸ್ತೆ ಎಂದುನಾಮಕರಣ ಮಾಡಿದರು. ಬಳಿಕ ಪಂಡಿತ್ ದೀನ್ ದಯಾಳ್ ಕಬ್ಬಡಿ ಕ್ರೀಡಾಂಗಣ, ಗಣೇಶ ದೇವಸ್ಥಾನ, ರಾಮಮಂದಿರ, ಆಲದಮ್ಮ ದೇವಸ್ಥಾನ, ಆಂಜನೇಯ ದೇವಸ್ಥಾನ, ಆರೋಗ್ಯ ಕೇಂದ್ರ, ಬಿಬಿಎಂಪಿ ಪ್ರಾಥಮಿಕ ಶಾಲೆ, ಬಿಬಿಎಂಪಿ ಉರ್ದು ಪ್ರಾಥಮಿಕ ಶಾಲೆ, ಶುದ್ಧ ಕುಡಿಯುವ ನೀರಿನ ಘಟಕ, ಅಂಬೇಡ್ಕರ್ ಭವನ, ಗ್ರಂಥಾಲಯ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯರಾದ ಆರ್. ದೇವೇಗೌಡ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಸದಸ್ಯರು ಸೇರಿದಂತೆ ಸ್ಥಳೀಯ ನಾಯಕರು, ಬಿಜೆಪಿ ಮುಖಂಡರು ಭಾಗವಹಿಸಿದ್ದರು.