SRH | ಹೈದರಾಬಾದಿ ಬಕ್ರಾ ಆಗ್ತಾರಾ ವಿಲಿಯಮ್ಸನ್..!!
ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮನ್ಸ್ ತಂಡದಲ್ಲಿ ಹೈದರಾಬಾದಿ ಬಕ್ರಾ ಆಗುವ ಸಾಧ್ಯತೆಗಳಿವೆ ಎಂದು ಮಾಜಿ ಕ್ರಿಕೆಟರ್ ವಾಸೀಂ ಜಾಫರ್ ಸಂಚಲನ ಹೇಳಿಕೆಗಳನ್ನು ನೀಡಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಹರಾಜಿನಲ್ಲಿ ಹೈದರಾಬಾದ್ ತಂಡ ಸ್ಟಾರ್ ಆಟಗಾರರನ್ನು ತೆಗೆದುಕೊಳ್ಳಲಿಲ್ಲ. ಅದರಲ್ಲೂ ಫಾರ್ಮ್ ನಲ್ಲಿಲ್ಲದ ನಿಕೋಲಸ್ ಪೂರನ್ ಅವರಿಗಾಗಿ ಬರೋಬ್ಬರಿ 10 ಕೋಟಿ ರುಪಾಯಿಗಳನ್ನ ಖರ್ಚು ಮಾಡಿದೆ.
ಮತ್ತೊಬ್ಬ ವಿಂಡೀಸ್ ಬ್ಯಾಟರ್ ರೋಮಾರಿಯೋ ಶೆಫರ್ಡ್ ಅವರಿಗಾಗಿ 7.75 ಕೋಟಿ ವೆಚ್ಚ ಮಾಡಿ ಸಾಕಷ್ಟು ಕುತೂಹಲಗಳಿಗೆ ನಾಂದಿಯಾಡಿದೆ.
ಜೊತೆಗೆ ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ವಾಷಿಂಗ್ಟನ್ ಸುಂದರ್ ಮತ್ತು ಗ್ಲೆನ್ ಫಿಲಿಪ್ಸ್ ಅವರಂತಹ ಆಟಗಾರರನ್ನು ಖರೀದಿಸಿದೆ.
ಆದ್ರೆ ತಂಡದಲ್ಲಿ ಎಷ್ಟು ಜನ ಇದ್ದರೋ ಗೊತ್ತಿಲ್ಲ ಆದ್ರೆ ಕೇನ್ ವಿಲಿಯಮನ್ಸ್ ಗೆ ಬ್ಯಾಟಿಂಗ್ ಆರ್ಡರ್ ನಲ್ಲಿ ಯಾರನ್ನ ಕಳುಹಿಸಬೇಕು ಎಂಬುದರ ಬಗ್ಗೆ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ವಾಸೀಂ ಜಾಫರ್, ವಿಲಿಯಮ್ಸನ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಕೇನ್ ವಿಲಿಯಮ್ಸನ್ SRH ಬ್ಯಾಟಿಂಗ್ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿ ಹೆಚ್ಚಾಗಿ ಬರುತ್ತಾರೆ. ಇತ್ತೀಚಿನ ಐಪಿಎಲ್ ಮೆಗಾ ಹರಾಜಿನಲ್ಲಿ ಪೂರನ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಆಟಗಾರರನ್ನು ಖರೀದಿಸಿದ ಕಾರಣದಿಂದಾಗಿ ವಿಲಿಯಮ್ಸನ್ ತಮ್ಮ ಸ್ಥಾನವನ್ನು ಬೇರೆಯವರಿಗೆ ನೀಡುವ ಅವಕಾಶಗಳಿವೆ.
ತನಗೆ ಆಗಿಬರುವ ಮೂರನೇ ಸ್ಥಾನವನ್ನು ಬೇರೊಬ್ಬರಿಗೆ ಕೊಟ್ಟರೇ ಅದು ಬಕರಾ ಆದಂತೆ ಲೆಕ್ಕಾ. ಆದರೆ ಪವರ್‌ಪ್ಲೇಯಲ್ಲಿ ಹೆಚ್ಚು ರನ್ ಗಳಿಸುವ ಉದ್ದೇಶದಿಂದ ಹಿಟ್ಟರ್ ಗಳಿಗೆ ಚಾನ್ಸ್ ಕೊಡಬೇಕು.
ಇನ್ನು ಆರಂಭಿಕರಾಗಿ ಅಭಿಷೇಕ್ ಶರ್ಮಾ ಬಂದರೆ ಒಳ್ಳೆಯದು. ಆರಂಭಿಕರ ವಿಚಾರದಲ್ಲಿ ಅಭಿಷೇಕ್ ಉತ್ತಮ ಸ್ಟ್ರೈಕರ್ ಆಗಲಿದ್ದಾರೆ. ಇದು ಉತ್ತಮ ಆಯ್ಕೆ ಎಂದಿದ್ದಾರೆ ಕೇನ್.









