Kane Williamson: 8000 ಟೆಸ್ಟ್ ರನ್‌ಗಳೊಂದಿಗೆ ಹೊಸ ದಾಖಲೆ ಬರೆದ ಕೇನ್ ವಿಲಿಯಂಸನ್
ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಕೇನ್ ವಿಲಿಯಂಸನ್, ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿ಼ಲೆಂಡ್ ಪರ ಹೊಸ ದಾಖಲೆ ಬರೆದಿದ್ದಾರೆ.
ಸರಣಿಯ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದ ವಿಲಿಯಂಸನ್, ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ದ್ವಿಶತಕ ಬಾರಿಸಿ ಅಬ್ಬರಿಸಿದರು.
ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 8 ಸಾವಿರ ರನ್‌ಗಳನ್ನ ಪೂರೈಸಿದ ವಿಲಿಯಂಸನ್, ಈ ಸಾಧನೆ ಮಾಡಿದ ನ್ಯೂಜಿ಼ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಪಡೆದರು.
ಎರಡನೇ ಪಂದ್ಯ ಆರಂಭಕ್ಕೂ ಮುನ್ನ ಕೇನ್ ವಿಲಿಯಂಸನ್‌ಗೆ ಈ ಸಾಧನೆ ಮಾಡಲು 91 ರನ್‌ಗಳ ಅಗತ್ಯವಿತ್ತು.
ಆದರೆ 2ನೇ ದಿನದಾಟದ ಭೋಜನ ವಿರಾಮಕ್ಕೂ ಮೊದಲೇ ಶತಕ ಸಿಡಿಸಿದ ವಿಲಿಯಂಸನ್, ತಮ್ಮ 6ನೇ ಟೆಸ್ಟ್ ಶತಕ ದಾಖಲಿಸುವ ಜೊತೆಗೆ 8 ಸಾವಿರ ರನ್ ಪೂರೈಸಿದರು.
ನಂತರವೂ ಬ್ಯಾಟಿಂಗ್ ಆರ್ಭಟ ಮುಂದುವರಿಸಿದ ವಿಲಿಯಂಸನ್, 215 ರನ್‌ಗಳಿಸಿ ಅಬ್ಬರಿಸಿದರು.
ವೆಲ್ಲಿಂಗ್ಟ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದಲ್ಲಿ ಶ್ರೀಲಂಕಾ ಬೌಲರ್‌ಗಳನ್ನ ಕಾಡಿದ ಕೇನ್ ವಿಲಿಯಂಸನ್, ಅಂತಿಮವಾಗಿ 296 ಬಾಲ್‌ಗಳಲ್ಲಿ 23 ಬೌಂಡರಿ ಹಾಗೂ 2 ಸಿಕ್ಸ್ ನೆರವಿನಿಂದ 215 ರನ್‌ಗಳಿಸಿ ಪ್ರಭಾತ್ ಜಯಸೂರ್ಯ ಬೌಲಿಂಗ್‌ನಲ್ಲಿ ಔಟಾದರು.
ತಮ್ಮ ಈ ಅಮೋಘ ಇನ್ನಿಂಗ್ಸ್‌ನಲ್ಲಿ ಹೆನ್ರಿ ನಿಕೋಲ್ಸ್(200*) ಜೊತೆಗೂಡಿ 3ನೇ ವಿಕೆಟ್‌ಗೆ 363 ರನ್‌ಗಳ ಬೃಹತ್ ಜೊತೆಯಾಟವಾಡಿದರು.
Kane Williamson : Kane Williamson has written a new record with 8000 Test runs