Kane Williamson: ಸನ್ ರೈಸ್ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಕೇನ್ …
2023 IPL ಮಿನಿ ಹರಾಜು ಡಿಸೆಂಬರ್ 23 ರಂದು ನಡೆಯಲಿದು ಹಲವು ಪ್ರಾಂಚೈಸಿ ತಂಡದ ಆಟಗಾರರನ್ನ ಬಿಟ್ಟು ಹರಾಜಿನಲ್ಲಿ ಪಾಲ್ಗೊಳ್ಳಲು ಮುಂದಾಗಿವೆ. ಸನ್ ರೈಸ್ ಹೈದ್ರಾ ಪ್ರಾಂಚೈಸಿ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನೇ ತಂಡದಿಂದ ಕೈ ಬಿಟ್ಟಿದೆ. ಕಳೆದ ಭಾರಿ ಹೈದರಾಬಾದ್ ತಂಡ 14 ಕೋಟಿಗೆ ಕೇನ್ ವಿಲಿಯಮ್ಸನ್ ಅವರನ್ನ ಸನ್ ರೈಸ್ ಪರ್ಚೇಸ್ ಮಾಡಿತ್ತು.
ಸನ್ ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ತಮ್ಮನ್ನು ತಂಡದಿಂದ ಕೈಬಿಟ್ಟ ವಿಚಾರವಾಗಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಈ ಕುರಿತು ವಿಲಿಯಮ್ಸನ್, ಫ್ರಾಂಚೈಸಿ, ನನ್ನ ತಂಡಕ್ಕೆ ಮತ್ತು ಸಿಬ್ಬಂದಿಗಳಿಗೆ…. ಆರೇಂಜ್ ಆರ್ಮಿ ಚೆನ್ನಾಗಿತ್ತು. 8 ವರ್ಷ ತುಂಬ ಚೆನ್ನಾಗಿ ಆನಂದಿಸಿದ್ದೇನೆ. ಈ ತಂಡ ಮತ್ತು ಹೈದ್ರಾಬಾದ್ ನಗರ ನನಗೆ ಯಾವಗಲೂ ವಿಶೇಷ ಎಂದು ಭಾವನಾತ್ಮಕವಾಗಿ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸನ್ ರೈಸರ್ಸ್ ತಂಡಕ್ಕ 8 ವರ್ಷಗಳ ಕಾಲ ನಾಯಕರಾಗಿದ್ದರು. ಐಪಿಎಲ್ನಲ್ಲಿ 2,101 ರನ್, 36.22 ಎವರೇಜ್ ಹೊಂದಿದ್ದು 126.03 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
2015 ರಲ್ಲಿ ಸನ್ ರೈಸರ್ಸ್ಗ ಬಂದ ಕೇನ್ ವಿಲಿಯಮ್ಸನ್ 2018 ರಲ್ಲಿ ತಂಡದ ನಾಯಕನಾದರು. 2018 ರಲ್ಲಿ ತಂಡವನ್ನು ಫೈನಲ್ ಗೆ ಕೊಂಡೊಯ್ದದಿದ್ದರು.
Kane Williamson: Kane wrote an emotional letter to Sunrise fans…