ನ್ಯೂಜಿಲೆಂಡ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್ ತಮ್ಮ ಟೆಸ್ಟ್ ಕ್ರಿಕೆಟ್ ಕೇರಿಯರ್ನಲ್ಲಿ 9,000 ರನ್ಗಳನ್ನು ಪೂರೈಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಅವರು ಈ ಸಾಧನೆ ಮಾಡಿದ ಮೊದಲ ನ್ಯೂಜಿಲೆಂಡ್ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಅತಿ ಕಡಿಮೆ ಪಂದ್ಯಗಳಲ್ಲಿ 9,000 ಟೆಸ್ಟ್ ರನ್ ಗಳಿಸಿದ ಆಟಗಾರರ ಪಟ್ಟಿ:
1. ಸ್ಟೀವ್ ಸ್ಮಿತ್ – 99 ಪಂದ್ಯಗಳು
2. ಬ್ರಯಾನ್ ಲಾರಾ – 101 ಪಂದ್ಯಗಳು
3. ಕುಮಾರ್ ಸಂಗಕ್ಕಾರ, ಯೂನಿಸ್ ಖಾನ್, ಕೇನ್ ವಿಲಿಯಮ್ಸನ್ – 103 ಪಂದ್ಯಗಳು
ಈ ಸಾಧನೆಯ ಮೂಲಕ ವಿಲಿಯಮ್ಸನ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ.